
– ಪ್ರಧಾನಿಗಳ ಹಳೆಯ ಕಚೇರಿ ಏನಾಗುತ್ತದೆ?
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ʻಸೆಂಟ್ರಲ್ ವಿಸ್ಟಾʼ (Central Vista) ಯೋಜನೆಯ ಭಾಗವಾಗಿ ನಿರ್ಮಿಸಲಾದ ʻಸೇವಾ ತೀರ್ಥʼ ಸಂಕೀರ್ಣವನ್ನ ಪ್ರಧಾನಿ ನರೇಂದ್ರ ಮೋದಿ ಅವರಿಂದು ಅನಾವರಣಗೊಳಿಸಲಿದ್ದಾರೆ. ಶೀಘ್ರದಲ್ಲೇ ಪ್ರಧಾನಿಗಳ ಕಚೇರಿಯನ್ನ ಇದೇ ಸಂಕೀರ್ಣದ ಕಚೇರಿಗೆ ಸ್ಥಳಾಂತರಿಸಲಾಗುತ್ತದೆ. 1947 ರ ಬಳಿಕ ಅಂದ್ರೆ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಗಳ ಕಚೇರಿ ಬದಲಾವಣೆ ಮಾಡುತ್ತಿರುವುದು ಗಮನಾರ್ಹ
ʻಸೇವಾ ತೀರ್ಥʼ, ಕರ್ತವ್ಯ ಭವನ -1 ಮತ್ತು 2 ಅನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುತ್ತಿದೆ. ಮಧ್ಯಾಹ್ನ 1:30 ಕ್ಕೆ ʻಸೇವಾ ತೀರ್ಥʼ ಹೆಸರನ್ನ ಅನಾವರಣಗೊಳಿಸಲಿದ್ದಾರೆ. ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.

ಹೊಸ ಕಟ್ಟಡವು ಪ್ರಧಾನಿಗಳ ಕಚೇರಿ, ಕ್ಯಾಬಿನೆಟ್ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (NSCS) ಕಚೇರಿಗಳನ್ನ ಒಳಗೊಂಡಿರಲಿದೆ. ಇವೆಲ್ಲವೂ ಈ ಹಿಂದೆ ಪ್ರತ್ಯೇಕ ಸ್ಥಳಗಳಲ್ಲಿ ನಿರ್ಮಾಣವಾಗಿದ್ದವು
ಏಕೆ ಸೇವಾ ತೀರ್ಥ ಹೆಸರು?
ಪ್ರಧಾನಿಗಳ ಹೊಸ ಕಚೇರಿಗೆ ʻಸೇವೆʼ ಎಂಬ ವಸ್ತುವಿಷಯವನ್ನಾಧರಿಸಿ ʻಸೇವಾ ತೀರ್ಥ-1ʼ (Seva Teert) ಎಂದು ನಾಮಕರಣ ಮಾಡಲಾಗಿದೆ. ಜೊತೆಗೆ ಸೇವೆಯ ಮಹತ್ವವನ್ನ ಬಿಂಬಿಸುವ ಆಧುನಿಕ ಕಾರ್ಯಕ್ಷೇತ್ರಗಳು ಹಾಗೂ ಭವ್ಯ ಸಮಾರಂಭ ಕೊಠಡಿಗಳನ್ನೂ ಒಳಗೊಂಡಿದೆ. ಇನ್ನೂ ಕ್ಯಾಬಿನೆಟ್ ಸಚಿವಾಲಯಕ್ಕೆ ನಿರ್ಮಿಸಲಾದ ಕಚೇರಿಗೆ ʻಸೇವಾ ತೀರ್ಥ -2ʼ, ರಾಷ್ಟ್ರೀಯ ಭದ್ರತಾ ಸಲಹೆಗಾರರ ಕಚೇರಿಗೆ ʻಸೇವಾ ತೀರ್ಥ-3ʼ ಎಂದು ನಾಮಕರಣ ಮಾಡಲಾಗಿದೆ.
1,189 ಕೋಟಿ ರೂ. ವೆಚ್ಚ
ಪ್ರಧಾನಿಗಳ ಕಚೇರಿಯನ್ನೊಳಗೊಂಡ ಸಂಪೂರ್ಣ ʻಸೇವಾ ತೀರ್ಥʼ ಸಂಕೀರ್ಣವನ್ನ 1,189 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರ ಒಟ್ಟು ವಿಸ್ತೀರ್ಣ 2,26,203 ಚದರ ಅಡಿ ಇದೆ. ಇನ್ನೂ ಪ್ರಧಾನ ಮಂತ್ರಿಯವರ ಹೊಸ ಅಧಿಕೃತ ನಿವಾಸವನ್ನ ʻಕಾರ್ಯನಿರ್ವಾಹಕ ಎನ್‌ಕ್ಲೇವ್ ಭಾಗ 2ʼ (Executive Enclave Part 2) ಎಂದು ಹೆಸರಿಸಲಾಗಿದೆ.
ಪ್ರಧಾನಿಗಳ ಹಳೇ ಕಚೇರಿ ಏನಾಗುತ್ತೆ?
ಪ್ರಧಾನ ಮಂತ್ರಿಗಳು ಹೊಸ ಕಚೇರಿಗೆ ಸ್ಥಳಾಂತರಗೊಳ್ಳುತ್ತಿದ್ದಂತೆ ದಕ್ಷಿಣ ಮತ್ತು ಉತ್ತರ ಬ್ಲಾಕ್‌ಗಳಲ್ಲಿರುವ ಕಚೇರಿಗಳನ್ನು ವಸ್ತು ಸಂಗ್ರಹಾಲಯಗಳನ್ನಾಗಿ ಬದಲಾವಣೆ ಮಾಡಲಾಗುತ್ತದೆ, ʻ’ಯುಗೆ ಯುಗೀನ್ ಭಾರತ್ ಸಂಗ್ರಹಾಲಯʼ ಹೆಸರಿನಲ್ಲಿ ಸಾರ್ವಜನಿಕ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗುತ್ತದೆ. ಯೋಜಿತ ವಸ್ತು ಸಂಗ್ರಹಾಲಯದ ಅಭಿವೃದ್ಧಿಗಾಗಿ 2024ರ ಡಿಸೆಂಬರ್ 19 ರಂದು ಫ್ರಾನ್ಸ್‌ನ ಮ್ಯೂಸಿಯಂ ಅಭಿವೃದ್ಧಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.





Be the first to comment
Leave a Reply