
ದಿಲ್ಲಿ–ಮೀರಟ್ ನಡುವೆ ಹೊಸ ಅಧ್ಯಾಯ ಆರಂಭವಾಗಿದೆ. ವೇಗ, ಸುರಕ್ಷತೆ ಸೇರಿ ಮೂರು ಆಯಾಮದಲ್ಲಿ ನಮೋ ಭಾರತ ರೈಲು ಜನರ ಬದುಕಿನಲ್ಲಿ ಹೊಸ ಬದಲಾವಣೆಯನ್ನು ತರಲು ಸಿದ್ಧವಾಗಿದೆ. ಇದು ಕೇವಲ ರೈಲು ಯೋಜನೆ ಮಾತ್ರವಲ್ಲ, ಭವಿಷ್ಯದ ನಗರ ಸಾರಿಗೆಗೆ ಮಾದರಿಯಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ದಿಲ್ಲಿ–ಮೀರಟ್ ಮಾರ್ಗದಲ್ಲಿ ವೇಗವಾದ ರೈಲು ಸಂಪರ್ಕಕ್ಕಾಗಿ ಬಹುಕಾಲದಿಂದ ಕಾಯುತ್ತಿದ್ದ ಜನರಿಗೆ ಈಗ ದೊಡ್ಡ ಉಡುಗೊರೆ ಸಿಕ್ಕಿದೆ. Delhi–Meerut RRTS ಯೋಜನೆಯಡಿ ಸಂಚರಿಸುವ Namo Bharat ರೈಲಿಗೆ ಪ್ರಧಾನಮಂತ್ರಿ Narendra Modi ಹಸಿರು ನಿಶಾನೆ ತೋರಿದರು. ಇದರಿಂದ ದಿಲ್ಲಿ ಮತ್ತು ಮೀರಟ್ ನಡುವೆ ಪ್ರಯಾಣ ಇನ್ನಷ್ಟು ಸುಲಭ ಮತ್ತು ವೇಗವಾಗಿ ಆಗಲಿದೆ.
82.15 ಕೀಮಿ ಮಾರ್ಗದ ಉದ್ದ!
ಈ ಮಾರ್ಗದ ಒಟ್ಟು ಉದ್ದ 82.15 ಕಿಲೋಮೀಟರ್. ಇದರಲ್ಲಿ 68 ಕಿಲೋಮೀಟರ್ ಭಾಗ ಉತ್ತರ ಪ್ರದೇಶದಲ್ಲಿ ಬರುತ್ತದೆ. ದಿಲ್ಲಿ ಭಾಗದಲ್ಲಿ ಸುಮಾರು 14 ಕಿಲೋಮೀಟರ್ ಮಾರ್ಗವಿದೆ. ವಿಶೇಷವೆಂದರೆ ಈ ಯೋಜನೆಯಲ್ಲಿ 70 ಕಿಲೋಮೀಟರ್ ಎಲಿವೇಟೆಡ್ ಮಾರ್ಗ (ಅಂದರೆ ನೆಲದ ಮೇಲ್ಭಾಗದಲ್ಲಿ ನಿರ್ಮಿಸಿದ ಹಾದಿ) ಇದೆ. ಸುಮಾರು 12 ಕಿಲೋಮೀಟರ್ ಭಾಗ ಭೂಗತ ಮಾರ್ಗವಾಗಿದ್ದು(ಅಂಡರ್ ಗ್ರೌಂಡ್) ಇದರಿಂದ ನಗರ ಸಂಚಾರಕ್ಕೆ ಅಡಚಣೆ ಆಗುವುದಿಲ್ಲ.
30 ಸಾವಿರ ಕೋಟಿ ವೆಚ್ಚ!
ಈ ದೊಡ್ಡ ಯೋಜನೆಗೆ ಸುಮಾರು 30,274 ಕೋಟಿ ರೂಪಾಯಿ ವೆಚ್ಚವಾಗಿದೆ. ಇದನ್ನು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ರೈಲು ಒಳಗೆ ಆರಾಮದಾಯಕ ಆಸನಗಳು, ಸ್ವಚ್ಛ ವಾತಾವರಣ, ಸಿಸಿಟಿವಿ ಕ್ಯಾಮೆರಾ, ಸುರಕ್ಷತಾ ವ್ಯವಸ್ಥೆಗಳು ಇದ್ದು, ಪ್ರಯಾಣಿಕರಿಗೆ ಉತ್ತಮ ಅನುಭವ ನೀಡಲಿದೆ.
ದಿಲ್ಲಿಯಿಂದ ಮೀರತ್ ತನಕ ವೇಗದ ಸಂಚಾರ!
ನಮೋ ಭಾರತ ರೈಲು ದಿಲ್ಲಿಯಿಂದ ಮೀರತ್ ತನಕ ಸಂಚರಿಸುತ್ತದೆ. ಈ ರೈಲು ವೇಗವಾಗಿ ಓಡುವುದರಿಂದ ದಿಲ್ಲಿಯಿಂದ ಮೀರಟ್ ತಲುಪಲು ಬೇಕಾಗುವ ಸಮಯ ಬಹಳಷ್ಟು ಕಡಿಮೆಯಾಗುತ್ತದೆ. ಮೊದಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿದ್ದರೆ, ಈಗ ಅದಕ್ಕಿಂತ ಕಡಿಮೆ ಸಮಯದಲ್ಲಿ ಪ್ರಯಾಣ ಸಾಧ್ಯವಾಗುತ್ತದೆ. ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರಿಗೆ ಇದು ಬಹಳ ಉಪಯುಕ್ತವಾಗಲಿದೆ.
ಸುರಕ್ಷಿತ ಸಾರಿಗೆ ಒದಗಿಸುವ Nomo Bharat: ಭಾರತದ ಅತ್ಯಂತ ವೇಗದ ಮೆಟ್ರೋಗೆ ಮೋದಿ ಚಾಲನೆ, ನಮೋ ಭಾರತ್ ರೈಲಿಗೂ ಹಸಿರು ನಿಶಾನೆ!
ಉದ್ದೇಶ!
ಈ ಯೋಜನೆಯ ಮುಖ್ಯ ಉದ್ದೇಶ ದೈನಂದಿನ ಪ್ರಯಾಣಿಕರಿಗೆ ವೇಗವಾದ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸುವುದು. ರಸ್ತೆ ಸಂಚಾರದಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆಯಾಗಿತ್ತು. ಈಗ ಹಲವರು ರೈಲು ಬಳಸಿದರೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಸಮಯ ಮತ್ತು ಇಂಧನ ಉಳಿತಾಯವಾಗುತ್ತದೆ. ಪರಿಸರಕ್ಕೂ ಲಾಭವಾಗುತ್ತದೆ. ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಗೆ ವೇಗವಾದ ಸಾರಿಗೆ ವ್ಯವಸ್ಥೆ ಬಹಳ ಮುಖ್ಯ ಎಂದು ಹೇಳಿದರು. ಇಂತಹ ಯೋಜನೆಗಳು ಭಾರತದ ನಗರಗಳ ರೂಪವನ್ನು ಬದಲಾಯಿಸುತ್ತವೆ ಎಂದು ಹೇಳಿದರು. ಉತ್ತರ ಪ್ರದೇಶ ಮತ್ತು ದಿಲ್ಲಿ ರಾಜ್ಯಗಳ ಅಭಿವೃದ್ಧಿಗೆ ಇದು ಸಹಕಾರಿ ಆಗಲಿದೆ ಎಂದರು






Be the first to comment
Leave a Reply