ಡ್ರಗ್ಸ್‌ ನೀಡಿ ಅತ್ಯಾಚಾರ ಪ್ರಕರಣದಲ್ಲಿ ಕಾರ್ಪೊರೇಟರ್‌ ಮಗ ಅಂದರ್‌

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಬಂಧನವಾಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ಬೆಂಗಳೂರು, ಮಾರ್ಚ್​ 02: ಅಮೃತಹಳ್ಳಿಯ ವಿಲ್ಲಾದಲ್ಲಿ ನಡೆದಿರುವ ಅತ್ಯಾಚಾರ ಕೇಸ್ (Physical Abuse Case) ಸಂಬಂಧ ಮತ್ತೆ ಮೂವರ ಬಂಧನವಾಗಿದೆ. ಮಾಸ್ಟರ್ ಮೈಂಡ್ ನಿಖಿಲ್ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ರಾಜಕಾರಣಿ, ಕಾರ್ಪೊರೇಟರ್ (corporater)‌ ಮಗ ಸೇರಿದಂತೆ ಮೂವರನ್ನು ಪೊಲೀಸರು ಹೆಡೆಮುರಿ (bengaluru crime) ಕಟ್ಟಿದ್ದಾರೆ. ಕೃತ್ಯದ ವೇಳೆ ನಿಖಿಲ್ ಬಳಸಿದ್ದ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

 

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಬಂಧನವಾಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನು ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

 

ಡ್ರಗ್ಸ್ ನೀಡಿ ರೇಪ್ ಮಾಡಿದ್ದಾನೆ ಎನ್ನುವ ದೊಡ್ಡ ಆರೋಪ ಹೊತ್ತಿರುವ ನಿಖಿಲ್​​ನ ಕೆಲಸಕ್ಕೆಲ್ಲಾ ಈ ನಾಲ್ವರು ಕೂಡ ಬಲಗೈ ಎಡಗೈನಂತಿದ್ದರು. ಯಾವಾಗ ನಿಖಿಲ್ ಮತ್ತು ಡಿಕ್ಸನ್ ಬಂಧನವಾಯ್ತೋ ಈ ಮೂವರದ್ದು ಕೂಡ ಇದರಲ್ಲಿ ಪಾತ್ರವಿದೆ ಅನ್ನೋದು ಗೊತ್ತಾಯ್ತು. ಹೀಗಾಗಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಈಗ ಬಂಧಿಸಿದ್ದಾರೆ.

ನಿಖಿಲ್ ಪಾರ್ಟಿಯ ಮಾಸ್ಟರ್ ಮೈಂಡ್. ಡಿಕ್ಸನ್ ಸಾಂಡ್ರಾ ಹುಡುಗಿಯರನ್ನು ಕರೆತರುತ್ತಿದ್ದ. ಅನಿರುದ್ಧ ಪಾರ್ಟಿಗೆ ವಿಲ್ಲಾ ಬುಕ್ ಮಾಡಿ, ಹಣದ ವ್ಯವಸ್ಥೆ ಮಾಡುತ್ತಿದ್ದ. ಶ್ರವಣ್‌ ಹುಡುಗಿಯರನ್ನು ಪಿಕ್ ಮಾಡಿ ಕರೆತರುತ್ತಿದ್ದ. ಮೋಹಿತ್ ಮೂಲತಃ ಗುಜರಾತ್ ಮೂಲದವನಾಗಿದ್ದು ಇವನೂ ಪಾರ್ಟಿಯಲ್ಲಿದ್ದ. ಹೀಗೆ ನಿಖಿಲ್ ನಡೆಸುತ್ತಿದ್ದ ಪಾರ್ಟಿಯಲ್ಲಿ ಈ ನಾಲ್ವರು ಒಂದಲ್ಲಾ ಒಂದು ರೀತಿ ಪಾತ್ರಧಾರಿಗಳಾಗಿದ್ದರು. ಅನಿರುದ್ಧ ದಾವಣಗೆರೆ ಮೂಲದ ಮಾಜಿ ಕಾರ್ಪೊರೇಟರ್ ಮಗನಾಗಿದ್ದು, ಕಂಟ್ರಾಕ್ಟರ್ ಕೂಡ ಆಗಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಈ ಆರೋಪಿಗಳ ನೀಚತನದ ಬಗ್ಗೆ ತನಿಖೆ ಚುರುಕಾಗಿದೆ.

 

ಮತ್ತೊಂದು ಕಡೆ ಪ್ರೇಮಿಗಳ ದಿನಾಚರಣೆ ದಿನ ನಡೆದ ಪಾರ್ಟಿ ನಂತರ ನಿಖಿಲ್ ಸಂತ್ರಸ್ತೆಯನ್ನು ಡ್ರಾಪ್ ಮಾಡಿದ್ದ. ಈ ವೇಳೆ ನಿಖಿಲ್ ಇದೇ KA 05-NC 7299 ನೋಂದಣಿ ಫಾರ್ಚುನರ್ ಕಾರಿನಲ್ಲಿ ಯುವತಿಯನ್ನ ಹತ್ತಿಸಿಕೊಂಡು ಕಿರುಕುಳ ನೀಡಿ ಬೆದರಿಕೆ ಹಾಕಿದ್ದ. ಪಾರ್ಟಿ ಬಳಿಕ ಯುವತಿಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡಿದ್ದ ನಿಖಿಲ್, ನಡೆದ ವಿಚಾರವನ್ನು ಯಾರಿಗೂ ಹೇಳದಂತೆ ಅಸಭ್ಯವಾಗಿ ವರ್ತಿಸುತ್ತಲೇ ಯುವತಿಗೆ ಬೆದರಿಕೆ ಹಾಕಿದ್ದ ಅಂತಲೂ ಯುವತಿ ಆರೋಪಿಸಿದ್ದಾಳೆ.

 

Be the first to comment

Leave a Reply

Your email address will not be published. Required fields are marked *

ad image