ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಅವರು ಸಿನಿಮಾ ಅಪ್‌ಡೇಟ್ ಇಲ್ಲದಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆಗಾಗ ಕುಟುಂಬದ ಜೊತೆ ಕಾಣಿಸಿಕೊಂಡಿದ್ದು ಬಿಟ್ಟರೆ, ಪೋಸ್ಟ್ ಆಗಲಿ, ಸಿನಿಮಾ ಅಪ್‌ಡೇಟ್ ಆಗಲಿ ಏನನ್ನು ಶೇರ್ ಮಾಡುತ್ತಿಲ್ಲ. ಆದರೀಗ ನಟ ಏಕಾಏಕಿ ಬೇಸರದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಫೋಟೋನ ಪೋಸ್ಟ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಅವರು ಸಿನಿಮಾ ಅಪ್‌ಡೇಟ್ ಇಲ್ಲದಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆಗಾಗ ಕುಟುಂಬದ ಜೊತೆ ಕಾಣಿಸಿಕೊಂಡಿದ್ದು ಬಿಟ್ಟರೆ, ಪೋಸ್ಟ್ ಆಗಲಿ, ಸಿನಿಮಾ ಅಪ್‌ಡೇಟ್ ಆಗಲಿ ಏನನ್ನು ಶೇರ್ ಮಾಡುತ್ತಿಲ್ಲ. ಆದರೀಗ ನಟ ಏಕಾಏಕಿ ಬೇಸರದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ (777 charlie) ಸಿನಿಮಾದ ಫೋಟೋನ ಪೋಸ್ಟ್ ಮಾಡಿದ್ದಾರೆ.
ಬೇಸರದ ಪೋಸ್ಟ್?
‘ರಿಚರ್ಡ್ ಆ್ಯಂಟನಿ’ ಸಿನಿಮಾ ಘೋಷಣೆ ಮಾಡಿ ಹಲವು ಸಮಯ ಕಳೆದರೂ ಆ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಆದರೆ ಈ ಬಗ್ಗೆ ಕೆಲವು ದಿನಗಳ ಹಿಂದೆ ಪ್ರಮೋದ್ ಶೆಟ್ಟಿ ಅವರು ಸಣ್ಣ ಹಿಂಟ್ ಕೊಟ್ಟಿದ್ದರು. ಆದರೀಗ ಜೂನ್‌ನಲ್ಲಿ ಕಳೆದ ವರ್ಷ ರಿಲೀಸ್ ಆಗಿರುವ ಚಾರ್ಲಿ ಸಿನಿಮಾ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
‘777 ಚಾರ್ಲಿ’ ಸಿನಿಮಾದ ಬೇಸರದ ದೃಶ್ಯದ ಫೋಟೋವನ್ನು ಫೇಸ್ಬುಕ್ ಕವರ್ ಪೇಜ್ ಆಗಿ ಪೋಸ್ಟ್ ಮಾಡಿರೋದು ಚರ್ಚೆಗೆ ಕಾರಣ ಆಗಿದೆ.
ರಕ್ಷಿತ್ ಶೆಟ್ಟಿ ಬೇಸರ ಪೋಸ್ಟ್ ಕಂಡು ರಶ್ಮಿಕಾ ಮದುವೆ ವಿಚಾರವಾಗಿ ಹೋಲಿಕೆ ಮಾಡಿ ಕಮೆಂಟ್ ಮಾಡ್ತಿದ್ದಾರೆ ನೆಟ್ಟಿಗರು. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಬೇಸರದಲ್ಲಿರೋ ಫೋಟೋನೇ ಪೋಸ್ಟ್ ಮಾಡಿದ್ದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.
‘ಹಳೆಯದನ್ನು ಮರೆತು ಮುಂದೆ ಸಾಗಿ ಅಂತ ಕಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು. ಫೇಸ್ಬುಕ್ ಅಲ್ಲಿ ಅವರ ಕೊನೆಯ ಪೋಸ್ಟ್ ಬಂದಿದ್ದು 2025ರ ಏಪ್ರಿಲ್ನಲ್ಲಿ. ಆ ಬಳಿಕ ಅವರು ಪೋಸ್ಟ್ ಮಾಡುತ್ತಿರುವ ಫೋಟೋ ಇದೇ ಆಗಿದೆ.






Be the first to comment
Leave a Reply