ಮಕ್ಕಳ ಹೆಸರು ರಿವೀಲ್ ಮಾಡಿದ ರಾಮ್ ಚರಣ್..! ಹೆಸರಿನ ವಿಶೇಷತೆ ಏನು ಗೊತ್ತಾ?

ಮಕ್ಕಳ ಹೆಸರು ರಿವೀಲ್ ಮಾಡಿದ ರಾಮ್ ಚರಣ್..! ಹೆಸರಿನ ವಿಶೇಷತೆ ಏನು ಗೊತ್ತಾ?

ಟಾಲಿವುಡ್‌ನ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕೊನಿಡೆಲ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಮೆಗಾ ದಂಪತಿ ತಮ್ಮ ಮುದ್ದಾದ ಅವಳಿ ಮಕ್ಕಳಿಗೆ ನಾಮಕರಣ ಮಾಡಿದ್ದು, ಮಕ್ಕಳ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪೋಷಕರು ಮತ್ತು ಸಂಪ್ರದಾಯದಂತೆ ಸುಂದರವಾದ ಹೆಸರುಗಳನ್ನು ಆಯ್ಕೆ ಮಾಡಿದ್ದಾರೆ.

ಹೆಸರಿನ ವಿಶೇಷತೆ

ದಂಪತಿ ತಮ್ಮ ಗಂಡು ಮಗುವಿಗೆ ‘ಶಿವರಾಮ್’ ಎಂದು ಹೆಸರಿಟ್ಟರೆ, ಹೆಣ್ಣು ಮಗುವಿಗೆ ‘ಅನ್ವೀರಾ ದೇವಿ’  ಎಂದು ನಾಮಕರಣ ಮಾಡಿದ್ದಾರೆ. ಗಂಡು ಮಗುವಿನ ಹೆಸರು ‘ಶಿವರಾಮ್’, ಮೆಗಾಸ್ಟಾರ್ ಚಿರಂಜೀವಿ ಅವರ ಮೂಲ ಹೆಸರಾದ (ಶಿವಶಂಕರ ವರಪ್ರಸಾದ್) ‘ಶಿವ’ನ ಹೆಸರನ್ನು ಹಾಗೂ ರಾಮನ ಹೆಸರನ್ನು ಒಳಗೊಂಡಿದೆ ಎಂದು ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ಇನ್ನು ಮಗಳ ಹೆಸರು ‘ಅನ್ವೀರಾ ದೇವಿ’ ಕೂಡ ಶಕ್ತಿ ದೇವತೆಯ ಸಂಕೇತವಾಗಿ ವಿಶೇಷ ಅರ್ಥವನ್ನು ನೀಡುತ್ತದೆ. ಮೆಗಾಸ್ಟಾರ್ ಚಿರಂಜೀವಿ ಅವರ ಮನೆಯಲ್ಲಿ ನಡೆದ ಅದ್ದೂರಿ ಹಾಗೂ ಸಾಂಪ್ರದಾಯಿಕ ಸಮಾರಂಭದಲ್ಲಿ ಈ ನಾಮಕರಣ ಶಾಸ್ತ್ರ ನೆರವೇರಿದೆ. ಕುಟುಂಬದ ಆಪ್ತರು ಮತ್ತು ಸ್ನೇಹಿತರು ಈ ಶುಭಕಾರ್ಯದಲ್ಲಿ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ರಾಮ್ ಚರಣ್ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಹಿಂದೆ (2023ರಲ್ಲಿ) ರಾಮ್ ಚರಣ್ ದಂಪತಿಗೆ ‘ಕ್ಲಿನ್ ಕಾರಾ’ ಎಂಬ ಮಗಳು ಜನಿಸಿದ್ದಾಳೆ. ಇದೀಗ ಅವಳಿ ಮಕ್ಕಳ ಆಗಮನದೊಂದಿಗೆ ಮೆಗಾ ಕುಟುಂಬದಲ್ಲಿ ಸಂತಸ ಇಮ್ಮಡಿಯಾಗಿದೆ.

Be the first to comment

Leave a Reply

Your email address will not be published. Required fields are marked *

ad image