ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಶುಕ್ರವಾರ ಉದಯಪುರ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮಾರೆಗಳಿಗೆ ಪೋಸ್ ಕೂಡ ಕೊಟ್ಟಿದ್ದಾರೆ. ಜೋಡಿ ನೋಡಿ ಸಖತ್ ಖುಷ್ ಆಗಿದ್ದಾರೆ ಫ್ಯಾನ್ಸ್ . ಕೆಂಪು ಚೂಡಿದಾರ್ ಸೆಟ್ ಧರಿಸಿದ್ದ ರಶ್ಮಿಕಾ, ಪಾಪರಾಜಿಗಳಿಗೆ ಕೈ ಬೀಸಿದ್ದಾರೆ. ವಿಜಯ್ ಅವರನ್ನು ಹತ್ತಿರಕ್ಕೆ ಹಿಡಿದುಕೊಂಡು, ಮುಗುಳ್ನಕ್ಕರು. ವಿಜಯ್ ಅವರು ಸ್ಯಾಟಿನ್ ಪೌಡರ್-ನೀಲಿ ಕುರ್ತಾ-ಪೈಜಾಮ ಸೆಟ್ ಅನ್ನು ಧರಿಸಿದ್ದರು.

ಕೊಡವ ಸಂಪ್ರದಾಯ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಉದಯಪುರದಲ್ಲಿ ಫೆಬ್ರವರಿ 26 ರಂದು ಐಷಾರಾಮಿ ಐಟಿಸಿ ಮೆಮೆಂಟೋಸ್ನಲ್ಲಿ ನಡೆಯಿತು. ವಿವಾಹ ಸಮಾರಂಭವು ತೆಲುಗು ಮತ್ತು ಕೊಡವ ಸಂಪ್ರದಾಯಗಳ ಪ್ರಕಾರ ನಡೆಯಿತು.
ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆ ನಡೆದರೆ, ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ಉದಯಪುರದಲ್ಲಿ ನಡೆದ ಈ ಮದುವೆಗೆ ಕೆಲವೇ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಹೈದರಾಬಾದ್ ಮತ್ತು ವಿರಾಜಪೇಟೆಯಲ್ಲಿ ಆರತಕ್ಷತೆ ಆಯೋಜಿಸಲಾಗುತ್ತದೆ ಎನ್ನಲಾಗಿದೆ. ಭಾರತದ ವಿವಿಧ ಭಾಷೆಗಳ ಗಣ್ಯರನ್ನು ಆರತಕ್ಷತೆ ಆಹ್ವಾನಿಸುವ ಸಾಧ್ಯತೆ ಇದೆ.
ಹೈದರಾಬಾದ್ನಲ್ಲಿ ಮದುವೆ ಆರತಕ್ಷತೆ ಮಾರ್ಚ್ 4ರಂದು ನಡೆದರೆ ವಿರಾಜಪೇಟೆಯಲ್ಲಿ ಯಾವ ನಡೆಯಲಿದೆ ಎನ್ನುವುದು ತಿಳಿದು ಬಂದಿಲ್ಲ. ಇನ್ನು ಒಂದೇ ದಿನ ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ ನಡೆದಿದ್ದು ವಿಶೇಷ.
ಈ ಅದ್ಧೂರಿ ಮದುವೆಗಾಗಿ ಕೆಲವು ದಿನಗಳ ಹಿಂದೆಯೇ ಎರಡೂ ಕುಟುಂಬಸ್ಥರು ಉದಯಪುರಕ್ಕೆ ಆಗಿಮಿಸಿವೆ. ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಅತ್ಯಾಪ್ತರು ಪರಸ್ಪರ ಗೇಮ್ಗಳನ್ನು ಆಡಿದ್ದಾರೆ. ಅದ್ಧೂರಿಯಾಗಿ ನಡೆದ ಮೆಹಂದಿ, ಹಳದಿ, ಸಂಗೀತ್ ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
ಇಬ್ಬರ ಕಣ್ಣಲ್ಲೂ ನೀರು
ವಿವಾಹ ಸಮಾರಂಭದ ನಂತರ, ರಶ್ಮಿಕಾ ಮಂದಣ್ಣ ಅವರ ತಂಡವು ಪಾಪರಾಜಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಿತು. ವಿವಾಹ ಸ್ಥಳದ ಹೊರಗೆ ನಿಂತಿದ್ದ ಮಕ್ಕಳಿಗೆ ಸಿಹಿತಿಂಡಿಗಳನ್ನು ಸಹ ನೀಡಲಾಗಿದೆ. ವಿಜಯ್ ಮತ್ತು ರಶ್ಮಿಕಾ ಅವರ ತಂಡವು ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿತು. ರಶ್ಮಿಕಾ ಅವರ ಮಂಟಪ ಪ್ರವೇಶ ಅತ್ಯಂತ ಸುಂದರ ಮತ್ತು ವಿಶಿಷ್ಟವಾಗಿತ್ತು. ರಶ್ಮಿಕಾ ಅವರನ್ನು ವಧುವಾಗಿ ನೋಡಿ ವಿಜಯ್ ಕೂಡ ಭಾವುಕರಾದರು. ವೇದಿಕೆಯ ಮೇಲೆ ಇಬ್ಬರೂ ಪರಸ್ಪರ ಕುತ್ತಿಗೆಗೆ ಹಾರಗಳನ್ನು ಹಾಕಿದಾಗ, ಇಬ್ಬರ ಕಣ್ಣಲ್ಲೂ ನೀರು ಬಂತು.
ರಶ್ಮಿಕಾ ಮತ್ತು ವಿಜಯ್ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಅವರು ಈ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗಪಡಿಸಿರಲಿಲ್ಲ. ಮದುವೆಗೆ ಕೆಲವು ದಿನಗಳ ಮೊದಲು, ವಿಜಯ್ ಮತ್ತು ರಶ್ಮಿಕಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದರು.

Be the first to comment
Leave a Reply