
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ಐಶಾರಾಮಿ ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ವಿವಾಹ ಆಗುತ್ತಿದ್ದು, ನಿನ್ನೆ ಅರಿಶಿಣ ಶಾಸ್ತ್ರ ಬಲು ಅದ್ಧೂರಿಯಾಗಿ ನೆರವೇರಿದೆ. ಹಳದಿ ಶಾಸ್ತ್ರದಲ್ಲಿ ಭಾಗವಹಿಸಿದ ಅತಿಥಿಗಳು ಹಂಚಿಕೊಂಡಿರುವ ಸುಂದರ ಚಿತ್ರಗಳು ಇಲ್ಲಿವೆ ನೋಡಿ…

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ಐಶಾರಾಮಿ ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ವಿವಾಹ ಆಗುತ್ತಿದ್ದು, ನಿನ್ನೆ ಅರಿಶಿಣ ಶಾಸ್ತ್ರ ಅಥವಾ ಹಳದಿ ಶಾಸ್ತ್ರ ಬಲು ಅದ್ಧೂರಿಯಾಗಿ ನೆರವೇರಿದೆ.

ಹಳದಿ ಶಾಸ್ತ್ರಕ್ಕಾಗಿ ವಿಶೇಷ ಥೀಮ್ಗಳೊಂದಿಗೆ ವೇದಿಕೆ ಸಿದ್ಧಪಡಿಸಲಾಗಿತ್ತು. ‘ವಿಜಯ್’, ‘ರಶಿ’ ಎಂದು ಬರೆದ ಕೃತಕ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಮಣ್ಣಿನ ಮಡಿಕೆಗಳಿಂದ ಮಾಡಿದ ಮಾದರಿ ಗಮನ ಸೆಳೆಯುತ್ತಿತ್ತು.

ವಧು-ವರರಿಗೆ ಬಂದ ಅತಿಥಿಗಳು, ಸಂಬಂಧಿಗಳು ಹಳದಿ ಬಳಿದರು, ಮಾತ್ರವಲ್ಲದೆ ತಾವೂ ಸಹ ಮನಸೋಇಚ್ಛೆ ಹಳದಿಯನ್ನು ಬಳದಿಕೊಂಡರು. ವಧು-ವರರೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡರು. ನಟಿ ಕಲ್ಯಾಣಿ ಪ್ರಿಯದರ್ಶನ್, ಕನ್ನಡದ ನಟಿ ಆಶಿಕಾ ರಂಗನಾಥ್ ಸೇರಿದಂತೆ ರಶ್ಮಿಕಾ ಹಾಗೂ ವಿಜಯ್ ಅವರ ಗೆಳೆಯರು ಹಳದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಖತ್ ಮಜಾ ಮಾಡಿದರು. ಆಶಿಕಾ ರಂಗನಾಥ್, ಕಲ್ಯಾಣಿ ಪ್ರಿಯದರ್ಶನ್ ಸೇರಿದಂತೆ ಹಲವು ಗಣ್ಯರು ರಶ್ಮಿಕಾ ಮತ್ತು ವಿಜಯ್ ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಕಾರ್ಯಕ್ರಮದ ಚಿತ್ರಗಳನ್ನು ಭಿನ್ನವಾಗಿ ವಿರೋಶ್ ಹೆಸರಿನ ಫೋಟೊ ಸ್ಟ್ರಿಪ್ ಮೂಲಕ ಅತಿಥಿಗಳಿಗೆ ನೀಡಿರುವುದು ವಿಶೇಷವಾಗಿದೆ. ಒಟ್ಟಾರೆ ವಿಜಯ್-ರಶ್ಮಿಕಾ ಮದುವೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.






Be the first to comment
Leave a Reply