ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ

– ಮದುವೆಗೆ ಸಿನಿಮಾ ನಟ, ನಟಿಯರಿಗಿಲ್ಲ ಆಹ್ವಾನ

ತಾರಾ ಜೋಡಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarkonda) ಇದೇ ಫೆ.26ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ಫೋನ್ ಬ್ಯಾನ್ ಮಾಡಲಾಗಿದ್ದು. ವಿಡಿಯೋ ಚಿತ್ರೀಕರಿಸುವ ತಂಡದಿಂದಲೂ ರಹಸ್ಯವಾಗಿಡುವಂತೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಫೆ.26ರಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಫೆ.24ರಂದು ಮದುವೆ ಸಮಾರಂಭಗಳು ಆರಂಭವಾಗಿ ಫೆ.26ಕ್ಕೆ ಕೊನೆಗೊಳ್ಳಲಿದ್ದು, ಇದು ಆಡಂಬರವಾಗಿರದೇ ಸರಳವಾಗಿ ಹಾಗೂ ರಹಸ್ಯವಾಗಿರಿಸಲು ಇಚ್ಛಿಸಿದ್ದಾರೆ.

ಮದುವೆಗೆ ಬರುವ ಅತಿಥಿಗಳ ಪಟ್ಟಿಯು ಕಡಿಮೆಯಾಗಿದ್ದು, ಹೀಗಾಗಿ ಮದುವೆ ದಿನ ಫೋನ್ ಬ್ಯಾನ್ ಮಾಡಲಾಗಿದೆ. ಜೊತೆಗೆ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡದಂತೆ ಫ್ರೋಟೋಗ್ರಾಫಿ ತಂಡದ ಜೊತೆ NDA (Non-Disclosure Agreement) (ಬಹಿರಂಗಪಡಿಸದಂತೆ) ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಮದುವೆಗೆ ಯಾವುದೇ ನಟರು ಹಾಗೂ ಉದ್ಯಮಿಗಳಿಗೆ ಆಹ್ವಾನಿಸಲಾಗಿಲ್ಲ. ಕೇವಲ ಕುಟುಂಬಸ್ಥರು ಮತ್ತು ಅತ್ಯಾಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನಿಸಲಾಗಿದೆ. ಈಗಾಗಲೇ ಕೆಲವು ಸಮಾರಂಭಗಳು ವಿಜಯ್ ಹಾಗೂ ರಶ್ಮಿಕಾ ಮನೆಯಲ್ಲಿ ಪ್ರತ್ಯೇಕವಾಗಿ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

 

ಮಾ.4ರಂದು ಹೈದರಾಬಾದ್‌ನ ಹೋಟೆಲ್‌ವೊಂದರಲ್ಲಿ ಆರತಕ್ಷತೆ ನಡೆಯಲಿದೆ. ಈ ವೇಳೆ ಸ್ನೇಹಿತರು, ನಟ, ನಟಿಯರು ಹಾಗೂ ಉದ್ಯಮಿಗಳಿಗೆ ಆಹ್ವಾನಿಸಲಾಗಿದೆ ಎಂದು ತಿಳಿದುಬಂದಿದೆ.

Be the first to comment

Leave a Reply

Your email address will not be published. Required fields are marked *

ad image