ಕೋರ್ಟ್ ಮೆಟ್ಟಿಲೇರಿದ ರೇಣುಕಾಸ್ವಾಮಿ ತಂದೆ

ಕೋರ್ಟ್ ಮೆಟ್ಟಿಲೇರಿದ ರೇಣುಕಾಸ್ವಾಮಿ ತಂದೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ 57ನೇ ಸಿಸಿಹೆಚ್‌ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹತ್ಯೆ ಸಮಯದಲ್ಲಿ ರೇಣುಕಾಸ್ವಾಮಿ ಧರಿಸಿದ್ದ ಚಿನ್ನದ ಚೈನ್, ಉಂಗುರವನ್ನು ಕಸ್ಟಡಿಗೆ ನೀಡಲು ಮನವಿ ಮಾಡಿಕೊಂಡಿದ್ದಾರೆ. ಚಿನ್ನದ ಒಡವೆ  ರೇಣುಕಾಸ್ವಾಮಿ ತಾಯಿ ಅಂದರೆ ತಮ್ಮ ಪತ್ನಿಯ ಕಸ್ಟಡಿಗೆ ನೀಡಲು ಮನವಿ ಮಾಡಿಕೊಂಡಿದ್ದರು. ಈ ಮನವಿ ಪುರಸ್ಕರಿಸಿದ ಕೋರ್ಟ್, ಕೆಲ ಷರತ್ತುಗಳನ್ನು ವಿಧಿಸಿ, ರೇಣುಕಾಸ್ವಾಮಿ ತಂದೆ ಮನವಿಗೆ ಅಸ್ತು ಎಂದಿದೆ. 2 ಲಕ್ಷದ ಬಾಂಡ್, ಕೋರ್ಟ್ ಕೇಳಿದಾಗ ಹಾಜರುಪಡಿಸಬೇಕು, ಒಡವೆಯ ಸ್ವರೂಪ ಬದಲಿಸಬಾರದು ಅಂತ ಹೇಳಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಈ ಒಡವೆ ಮಾರಾಟ ಮಾಡಬಾರದು ಅಂತ ಕೋರ್ಟ್ ಖಡಕ್ ಸೂಚನೆ ನೀಡಿದೆ.

Be the first to comment

Leave a Reply

Your email address will not be published. Required fields are marked *

ad image