ರಾಕಿ ‘ಭಾಯ್’ ಗೆಟಪ್ ಕಳಚಿ ‘ರಾಯ್’ ಅವತಾರ.. ಯಶ್ ಗಡ್ಡಕ್ಕೆ ಕತ್ತರಿ!

ರಾಕಿ ‘ಭಾಯ್’ ಗೆಟಪ್ ಕಳಚಿ ‘ರಾಯ್’ ಅವತಾರ.. ಯಶ್ ಗಡ್ಡಕ್ಕೆ ಕತ್ತರಿ!

ದೀರ್ಘಕಾಲದ ನಂತರ ಯಶ್ ತಮ್ಮ ‘ರಾಕಿ ಭಾಯ್’ ಗೆಟಪ್ ಕಳಚಿದ್ದು, ‘ಟಾಕ್ಸಿಕ್’ (Toxic) ಚಿತ್ರದಲ್ಲಿ ಹೊಸ ಅವತಾರ ತಾಳಿದ್ದಾರೆ. ಯಶ್ ಅವರ ಈ ಹೊಸ ಲುಕ್‌ನ ಮೇಕಿಂಗ್ ವಿಡಿಯೋ (Making Video) ಇದೀಗ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. KGF ಸಿನಿಮಾ ಶುರುವಾದಾಗಿನಿಂದಲೂ ಯಶ್ ಅವರನ್ನು ನಾವು ಉದ್ದನೆಯ ಗಡ್ಡ ಮತ್ತು ಮೀಸೆಯಲ್ಲೇ ನೋಡಿದ್ದೆವು. ಅಭಿಮಾನಿಗಳು ಕೂಡ ಆ ರಗಡ್ ಲುಕ್‌ಗೆ ಫಿದಾ ಆಗಿದ್ದರು. ಈಗ ‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ತಮ್ಮ ಉದ್ದನೆಯ ಕೂದಲಿಗೆ ಹಾಗೂ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತುಂಬಾ ವರ್ಷಗಳ ಬಳಿಕ ಯಶ್ ಸ್ಲಿಮ್ ಹಾಗೂ ಶಾರ್ಟ್ ಹೇರ್ ಸ್ಟೈಲ್‌ನಲ್ಲಿ (Trim Look) ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಹೊಸ ಯಶ್ ದರ್ಶನವಾಗಿದೆ.

ರಾಕಿ ‘ಭಾಯ್’ ಗೆಟಪ್ ಕಳಚಿ ‘ರಾಯ್’ ಅವತಾರ.. ಯಶ್ ಗಡ್ಡಕ್ಕೆ ಕತ್ತರಿ!

‘ಟಿಕೆಟ್’ ಪಾತ್ರಕ್ಕಾಗಿ ಮೇಕೋವರ್

ಟಾಕ್ಸಿಕ್ ಸಿನಿಮಾದಲ್ಲಿ ಯಶ್ ನಿರ್ವಹಿಸುತ್ತಿರುವ ಪಾತ್ರದ ಹೆಸರು ಅಥವಾ ಕೋಡ್‌ ನೇಮ್ ‘ಟಿಕೆಟ್’ (Ticket) ಎನ್ನಲಾಗಿದೆ. ಮೊನ್ನೆಯಷ್ಟೇ ರಿಲೀಸ್ ಆಗಿದ್ದ ಟೀಸರ್‌ನಲ್ಲಿ ಯಶ್ ಸಿಗಾರ್ ಸೇದುತ್ತಾ, ಗನ್ ಹಿಡಿದು ಮಾಸ್ ಎಂಟ್ರಿ ಕೊಟ್ಟಿದ್ದರು. ಇದೀಗ ಚಿತ್ರತಂಡ ಬಿಡುಗಡೆ ಮಾಡಿರುವ ಮೇಕಿಂಗ್ ವಿಡಿಯೋದಲ್ಲಿ, ಯಶ್ ಅವರ ಮೇಕೋವರ್ ಪ್ರಕ್ರಿಯೆಯನ್ನು ತೋರಿಸಲಾಗಿದೆ. ಬಾರ್ಬರ್ ಯಶ್ ಅವರ ಗಡ್ಡ ಮತ್ತು ಕೂದಲನ್ನು ಸ್ಟೈಲಿಶ್ ಆಗಿ ಕತ್ತರಿಸುವ ದೃಶ್ಯಗಳು ವಿಡಿಯೋದಲ್ಲಿವೆ.

ಡ್ಯಾಡೀಸ್ ಹೋಮ್

ವಿಡಿಯೋದ ಕೊನೆಯಲ್ಲಿ ಯಶ್ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾ, ‘ಡ್ಯಾಡೀಸ್ ಹೋಮ್’ ಎಂಬ ಡೈಲಾಗ್ ಹೊಡೆದಿದ್ದಾರೆ. ಇದು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಕೆವಿಎನ್ ಪ್ರೊಡಕ್ಷನ್ಸ್ (KVN Productions) ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಟಾಕ್ಸಿಕ್’ ಒಂದು ಪ್ಯಾನ್ ಇಂಡಿಯಾ ಮತ್ತು ಗ್ಲೋಬಲ್ ಮಟ್ಟದ ಸಿನಿಮಾವಾಗಿದೆ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ (Geetu Mohandas) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗೋವಾ ಹಾಗೂ ಡ್ರಗ್ ಮಾಫಿಯಾ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ ಎನ್ನಲಾಗಿದ್ದು, ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (A Fairy Tale for Grown-ups) ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಕಿಯಾರ ಅಡ್ವಾಣಿ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿರುವ ಸಾಧ್ಯತೆಯಿದೆ.

Be the first to comment

Leave a Reply

Your email address will not be published. Required fields are marked *

ad image