Sanjana Galrani: ಕನ್ನಡದಲ್ಲಿ ಸಂಜನಾ ಗಲ್ರಾನಿ ‘ಗಂಡ ಹೆಂಡತಿ’ ಚಿತ್ರದ ಮೂಲಕವೇ ಖ್ಯಾತಿ ಪಡೆದವರು. ವರ್ಷಗಳ ಹಿಂದೆ ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್ನಲ್ಲಿ ಸಿಲುಕಿದ್ದರು. ಅದರಿಂದ ಹೊರಗೆ ಬಂದ ಸಂಜನಾ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಳಿಕ ಬಿಗ್ ಬಾಸ್ನಲ್ಲಿ ಟಾಪ್ 5 ತನಕ ಬಂದು ಜನರ ಪ್ರೀತಿ ಸಂಪಾದಿಸಿದರು. ಇದೀಗ ಸಂಜನಾ ವಿಶ್ವವಾಣಿ ಜೊತೆ ಕೇಸ್ ವಿಚಾರವಾಗಿ, ಹಾಗೇ ಕೇಸ್ ಬಳಿಕ ಹೇಗೆ ಹೊಸ ಜೀವನ ಆರಂಭಿಸಿದೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕನ್ನಡದಲ್ಲಿ ಸಂಜನಾ ಗಲ್ರಾನಿ (sanjana galrani) ‘ಗಂಡ ಹೆಂಡತಿ’ ಚಿತ್ರದ ಮೂಲಕವೇ ಖ್ಯಾತಿ ಪಡೆದವರು. ವರ್ಷಗಳ ಹಿಂದೆ ಸಂಜನಾ ಗಲ್ರಾನಿ ಡ್ರಗ್ಸ್ ಕೇಸ್ನಲ್ಲಿ ಸಿಲುಕಿದ್ದರು. ಅದರಿಂದ ಹೊರಗೆ ಬಂದ ಸಂಜನಾ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬಳಿಕ ಪುಟ್ಟ ಪುಟ್ಟ ಮಕ್ಕಳನ್ನ ಬಿಟ್ಟು ಸಂಜನಾ ಗಲ್ರಾನಿ `ಬಿಗ್ ಬಾಸ್ ತೆಲುಗು 9’ (Bigg Boss Telugu) ಸ್ಪರ್ಧಿಯಾಗಿ ಹೋದರು. ಸಂಕಷ್ಟಗಳಿಗೆ ಸಿಲುಕಿದ್ದ ತಮಗೆ ಇದೊಂದು ಸುವರ್ಣಾವಕಾಶ ಎಂದು ನಟಿ ಬಿಗ್ ಬಾಸ್ನಲ್ಲಿ ಟಾಪ್ 5 ತನಕ ಬಂದು ಜನರ ಪ್ರೀತಿ ಸಂಪಾದಿಸಿದರು. ಇದೀಗ ಸಂಜನಾ ವಿಶ್ವವಾಣಿ ಜೊತೆ ಕೇಸ್ ವಿಚಾರವಾಗಿ, ಹಾಗೇ ಕೇಸ್ ಬಳಿಕ ಹೇಗೆ ಹೊಸ ಜೀವನ ಆರಂಭಿಸಿದೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸರಳ ಮದುವೆ
ಕೇಸ್ ಬಳಿಕ ಸಂಜನಾ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಡಾ ಅಜೀಜ್ ಪಾಷಾ ಅವರನ್ನ ವಿವಾಹವಾದರು. ಈ ಬಗ್ಗೆ ನಟಿ ಮಾತನಾಡಿ, ʻನನ್ನ ಮದುವೆ ಕೊವಿಡ್ ಸಮಯದಲ್ಲಿ ಆಗಿದ್ದು. ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ಮದುವೆ ಆಗಬೇಕು ಅಂತ ಆಸೆ ಇತ್ತು. ಆದರೆ ನನ್ನ ಯಜಮಾನರ ತಾಯಿಗೆ ಆಗ ತುಂಬಾ ವಯಸ್ಸಾಗಿತ್ತು. ಆರೋಗ್ಯ ಕೂಡ ಸರಿಯಿರಲಿಲ್ಲ. ಮದುವೆ ನೋಡಿಕೊಂಡೇ ಸಾಯಬೇಕು ಅನ್ನೋ ಆಸೆ ಅವರದ್ದಾಗಿತ್ತು. ಹಾಗಾಗಿ ಆ ಸಮಯದಲ್ಲಿ ತುಂಬಾ ಸರಳವಾಗಿ ಮದುವೆ ಆದೆವುʼ ಎಂದಿದ್ದಾರೆ.
ಪರ್ಸನಲ್ ಡೇಟಾ ಕೂಡ ಕೇಸ್ ಸಮಯದಲ್ಲಿ ಬಳಸಿಕೊಂಡರು
ʻನನ್ನ ತಂದೆ ತಾಯಿಗೂ ನನ್ನ ಪತಿ ಅಂದರೆ ಅಚ್ಚುಮೆಚ್ಚು. ಮಗನ ರೀತಿ ನೋಡ್ತಾರೆ. ಕೇಸ್ ಆಗುವ ಸಮಯದಲ್ಲಿಯೂ ಬೇರೆ ಧರ್ಮದವರಿಗೆ ಮದುವೆ ಮಾಡಿದ್ದಾರೆ ಅನ್ನೋ ಅಪ್ರಪಚಾರವೂ ಆಯ್ತು. ಇನ್ನು ಧರ್ಮದ ಆಯ್ಕೆ ನನ್ನ ವೈಯಕ್ತಿಕ ವಿಚಾರ. ಇದ ಬೇರೆ ಅವರಿಗೆ ಈ ವಿಚಾರ ಯಾಕೆ ಅನ್ನೋದು ಅರ್ಥ ಆಗಿಲ್ಲ. ನನ್ನ ಪರ್ಸನಲ್ ಡೇಟಾ ಕೂಡ ಕೇಸ್ ಸಮಯದಲ್ಲಿ ಕೆಟ್ಟದ್ದಾಗಿ ಬಳಸಿಕೊಂಡರುʼ ಎಂದಿದ್ದಾರೆ.
ಬಿಗ್ ಬಾಸ್ ಟರ್ನಿಂಗ್ ಪಾಯಿಂಟ್!
ಸಂಜನಾ ಮಾತು ಮುಂದುವರಿಸಿ, ʻಇದೆಲ್ಲ ಆದ ಬಳಿಕ ತೆಲುಗು ಬಿಗ್ ಬಾಸ್ನಿಂದ ಅವಕಾಶ ಬಂತು. ನಾನು ಕೇಸ್ ವಿಚಾರದಲ್ಲಿ ಬಲಿಪಶುವಾದೆ. ಈ ಕೇಸ್ ಮೂಲಕ ಕಲಿತ ಪಾಠ ಅಂದರೆ ಸ್ನೇಹಿತರೇ ಇರಬಾರದು. ಕೆಲಸ ವಿಚಾರಕ್ಕೆ ಮಾತ್ರ ಕ್ಲೋಸ್ ಆಗಬೇಕು. ಇನ್ನು ಈ ಕೇಸ್ ಆಗುವಾಗ ನಾನು ಸಾಕಷ್ಟು ಅನುಭವಿಸಿದೆ. ಬ್ಯಾಂಕ್ ಅಕೌಂಟ್ನಲ್ಲಿ ಹಣ ಕೂಡ ಇರಲಿಲ್ಲ. ಅದಾದ್ರೂ ಸಹಿಸಿಕೊಳ್ಳುವೆ. ಆದರೆ ಅವಮಾನ ಆಗಿ, ಗೌರವ ಕಳೆದುಕೊಂಡು ಇದ್ದರೆ ಅದನ್ನು ಸಹಿಸಿಕೊಳ್ಳೋದು ತುಂಬಾ ಕಷ್ಟ. ನಾವು ತಪ್ಪೇ ಮಾಡದೇ ಇರುವಾಗ ಈ ಕಳಂಕ ಹೊತ್ತಿಕೊಂಡು ಇರೋದು ತುಂಬಾ ಕಷ್ಟ. ಆ ಸಮಯದಲ್ಲಿ ನನ್ನ ಪರ ಇದ್ದಿದ್ದು ನನ್ನ ಕುಟುಂಬ ಮಾತ್ರ. ಆ ಸಮಯದಲ್ಲಿ ನಾನು ಪ್ರತಿದಿನ ಸಾವು ಕೊಡು ಅಂತ ದೇವರಲ್ಲಿ ಬೇಡುತ್ತಿದ್ದೆ. ಕೌನ್ಸಲಿಂಗ್ ಕೂಡ ತೆಗೆದುಕೊಂಡಿದ್ದೆʼ ಎಂದಿದ್ದಾರೆ.
ಜನರ ಪ್ರೀತಿ ಸಿಕ್ಕೇ ಬಿಡ್ತು!
ʻಬಿಗ್ ಬಾಸ್ ವೇದಿಕೆ ನನಗೆ ಎಲ್ಲವನ್ನೂ ಕೊಟ್ಟಿದೆ. ನನ್ನನ್ನು ನಾನು ಪ್ರೂವ್ ಮಾಡಿಕೊಳ್ಳಬೇಕಿತ್ತು. ಪ್ರೂವ್ ಮಾಡಿಕೊಂಡೆ ಕೂಡ. ನಾನು ಚಟವಾದಿ ಎಂಬ ಆರೋಪ ಇತ್ತು. ಆದರೆ ಬಿಗ್ ಬಾಸ್ ಮನೆಯಲ್ಲಿ ನಾನು ಸಿಗರೇಟ್ ಕೂಡ ಮುಟ್ಟಿಲ್ಲ. ಟಾಪ್ 5 ತನಕ ಬಂದೆ. ನನ್ನನ್ನು ನಾನು ಕೊನೆಗೂ ಪ್ರೂವ್ ಮಾಡಿಕೊಂಡೆ. ಜನರಿಂದ ಪ್ರೀತಿ ಬೇಕಿತ್ತು. ಹಾಗೆ ಸಿಕ್ಕಿದೆ ಕೂಡʼ ಎಂದಿದ್ದಾರೆ.






Be the first to comment
Leave a Reply