‘ಇದು ನಮ್ಮ ದೌರ್ಭಾಗ್ಯ’ ; ಪಾಪರಾಜಿಗಳ ವರ್ತನೆ ಬಗ್ಗೆ ಶಿವಣ್ಣ ಬೇಸರ

ನಟಿ ಸಪ್ತಮಿ ಗೌಡ ಅವರು ಒಂದು ಗಂಭೀರವಾದ ವಿಚಾರದ ಬಗ್ಗೆ ಧ್ವನಿ ಎತ್ತಿದ್ದರು. ಸಿನಿಮಾ ಇವೆಂಟ್‌ಗಳಲ್ಲಿ ಕೆಲ ಪಾಪರಾಜಿಗಳು ನಟಿಯರು ವಿಡಿಯೋಗಳನ್ನು ಚಿತ್ರೀಕರಿಸಿ, ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ನಟಿಯರ ದೇಹವನ್ನು ಅನಾವಶ್ಯಕವಾಗಿ ಜೂಮ್ ಮಾಡಿ, ವಿಡಿಯೋ ಚಿತ್ರೀಕರಿಸುವಂತಹ ಈ ಬೆಳವಣಿಗೆ ಬಗ್ಗೆ ನಟಿ ಸಪ್ತಮಿ ಗೌಡ ರೊಚ್ಚಿಗೆದ್ದಿದ್ದರು. ಸಪ್ತಮಿ ಗೌಡ ಮೊದಲು ಪ್ರಶ್ನಿಸಿದ್ದು, ರಮ್ಯಾ ಬೆಂಬಲಿಸಿದರು. ಈಗ ಶಿವರಾಜ್‌ಕುಮಾರ್ ಕೂಡ ‘ಇದು ನಮ್ಮ ದೌರ್ಭಾಗ್ಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಪ್ತಮಿ ಗೌಡ ಅವರು ಒಂದು ಗಂಭೀರವಾದ ವಿಚಾರದ ಬಗ್ಗೆ ಧ್ವನಿ ಎತ್ತಿದ್ದರು. ಸಿನಿಮಾ ಇವೆಂಟ್‌ಗಳಲ್ಲಿ ಕೆಲ ಪಾಪರಾಜಿಗಳು ನಟಿಯರು ವಿಡಿಯೋಗಳನ್ನು ಚಿತ್ರೀಕರಿಸಿ, ಸೋಶಿಯಲ್‌ ಮೀಡಿಯಾಗಳಲ್ಲಿ (Social Media) ಹಂಚಿಕೊಳ್ಳುತ್ತಿದ್ಧಾರೆ. ನಟಿಯರ ದೇಹವನ್ನು ಅನಾವಶ್ಯಕವಾಗಿ ಜೂಮ್ ಮಾಡಿ, ವಿಡಿಯೋ ಚಿತ್ರೀಕರಿಸುವಂತಹ ಈ ಬೆಳವಣಿಗೆ ಬಗ್ಗೆ ನಟಿ ಸಪ್ತಮಿ ಗೌಡ ರೊಚ್ಚಿಗೆದ್ದಿದ್ದರು. ಸಪ್ತಮಿ ಗೌಡ ಮೊದಲು ಪ್ರಶ್ನಿಸಿದ್ದು, ರಮ್ಯಾ ಬೆಂಬಲಿಸಿದರು. ಈಗ ಶಿವರಾಜ್‌ಕುಮಾರ್ (Shiva Rajkumar) ಕೂಡ ‘ಇದು ನಮ್ಮ ದೌರ್ಭಾಗ್ಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶಿವಣ್ಣ ಪೋಸ್ಟ್‌ ಏನು?

‘ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಗೌರವಿಸಿ ಎಂದು ಹೇಳಬೇಕೆಂದರೆ ಅದು ನಮ್ಮ ದೌರ್ಭಾಗ್ಯ. ದಯವಿಟ್ಟು ಆತ್ಮಸಾಕ್ಷಿ ಇಟ್ಟುಕೊಂಡು ಕೆಲಸ ಮಾಡಿ. ಹೆಣ್ಣು ಮಕ್ಕಳ ಗೌರವಕ್ಕೆ ಚ್ಯುತಿ ತರಬೇಡಿ’ ಎಂದು ಶಿವರಾಜ್​​ಕುಮಾರ್ ಅವರು ಕೋರಿಕೊಂಡಿದ್ದಾರೆ.

ಸಪ್ತಮಿ ಗೌಡ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?

“ಚಿತ್ರರಂಗದಲ್ಲಿರುವ ಮಹಿಳೆಯರಾಗಿ, ನಿರಂತರವಾಗಿ ನಡೆಯುತ್ತಿರುವ ಒಂದು ಗಂಭೀರ ಸಮಸ್ಯೆಯನ್ನು ಎದುರಿಸಲು ಒಟ್ಟಾಗಿ ನಿಂತಿದ್ದೇವೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳಾ ಕಲಾವಿದರ ವಿಡಿಯೋಗಳು ಮತ್ತು ಫೋಟೋಗಳನ್ನು ಅಸಭ್ಯ ಕೋನಗಳಿಂದ ಚಿತ್ರೀಕರಿಸಿ, ನಮ್ಮ ಕಲೆಯಿಗಿಂತ ನಮ್ಮ ದೇಹದ ಮೇಲೆ ಅನಾವಶ್ಯಕವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಘಟನೆಗಳು ಪುನಃ ಪುನಃ ನಡೆಯುತ್ತಿವೆ” ಎಂದು ಸಪ್ತಮಿ ಗೌಡ ಕಿಡಿಕಾರಿದ್ದರು.

“ಇಂತಹ ವರ್ತನೆ, ಕೆಲವರಿಂದ ನಡೆಯುತ್ತಿರುವುದಾದರೂ, ಅದು ಅಸಭ್ಯ,ಅವಮಾನಕಾರಿ ಮತ್ತು ಸೆಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದೆ. ನಾವು ಇಲ್ಲಿ ನಮ್ಮ ಕಲೆಗಾಗಿ ಬಂದಿದ್ದೇವೆ. ನಾವು ಇಲ್ಲಿ ನಮ್ಮ ಸಿನಿಮಾಕ್ಕಾಗಿ ಬಂದಿದ್ದೇವೆ. ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು ಮತ್ತು ಅಸಭ್ಯಕೋನಗಳಿಂದ ಬಳಸುವುದು ನಮ್ಮಗೌರವಕ್ಕೆ ಸ್ಪಷ್ಟ ಧಕ್ಕೆ. ಇದನ್ನು ಸಾಮಾನ್ಯವೆಂದು ಸ್ವೀಕರಿಸುವುದಿಲ್ಲ, ಸಹಿಸುವುದಿಲ್ಲ” ಎಂದು ಸಪ್ತಮಿ ಗೌಡ ಬರೆದುಕೊಂಡಿದ್ದರು.

“ಕಾರ್ಯಕ್ರಮಗಳನ್ನು ವರದಿ ಮಾಡುವವರು ವೃತ್ತಿಪರತೆ, ಮೂಲಭೂತ ಗೌರವ ಮತ್ತು ಶಿಸ್ತನ್ನು ಕಾಪಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ಗಡಿ ರೇಖೆಯನ್ನು ಸ್ಪಷ್ಟವಾಗಿ ಎಳೆದು, ನಾವು ಒಟ್ಟಾಗಿ ನಿಂತಿದ್ದೇವೆ. ಇಂತಹ ಅನುಭವವನ್ನು ಎದುರಿಸಿದ ಪ್ರತಿಯೊಬ್ಬ ಮಹಿಳೆಯೊಂದಿಗೂ ನಾವು ಐಕ್ಯತೆಯಲ್ಲಿ ನಿಂತಿದ್ದೇವೆ. ಗೌರವವನ್ನು ಬೇಡುವ ನಮ್ಮ ಧ್ವನಿ ಮುಂದುವರೆಯುತ್ತದೆ” ಎಂದು ಸಪ್ತಮಿ ಗೌಡ ತಿಳಿಸಿದ್ದರು.

 

Be the first to comment

Leave a Reply

Your email address will not be published. Required fields are marked *

ad image