ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ!

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: 8 ಆರೋಪಿಗಳ ಬಂಧನ!

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧ 8 ಆರೋಪಿಗಳನ್ನ ಬಂಧಿಸಲಾಗಿದ್ದು, ಘಟನೆ ಪೂರ್ವ ಯೋಜಿತವಲ್ಲ, ಡಿಜೆ ವಿಚಾರಕ್ಕೂ ಸಂಬಂಧಿಸಿಲ್ಲ ಎಂದು ತಿಳಿದು ಬಂದಿದೆ. ಮಸೀದಿ ಶೂ ರ್ಯಾಕ್‌ನಿಂದ ಕಲ್ಲು ತೂರಾಟ ನಡೆದಿರುವುದಾಗಿ ತಿಳಿಸಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್​ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಕುರಿತ ಎಲ್ಲಾ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬುಧವಾರ ಸಂಜೆ ನಡೆದ ಈ ಘಟನೆಯ ಹಿನ್ನೆಲೆ 8 ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ತನಿಖೆ ನಡೆಸಿದ್ದಾರೆ. ಈ ವೇಳೆ ಹೊರಬಂದ ಸತ್ಯವನ್ನು SP ಮಾಧ್ಯಮದ ಮುಂದಿಟ್ಟಿದ್ದಾರೆ.

ಶಿವಾಜಿ ಜಯಂತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದ ನವನಗರ ನಿವಾಸಿ ತನ್ವೀರ್ ಬಂಧಿಸಲಾಗಿದ್ದು, ಸುಮೋಟೋ ಕೇಸ್​​​ ದಾಖಲಿಸಿಕೊಂಡು FIR ಮಾಡಿದ್ದೇವೆ ಎಂದು ಎಸ್ಪಿ ಸಿದ್ಧಾರ್ಥ್​ ಹೇಳಿಕೆ ನೀಡಿದ್ದಾರೆ. ಸಿಸಿಟಿವಿ ದೃಶ್ಯ ಪರಿಶೀಲಿಸಿ 8 ಆರೋಪಿಗಳನ್ನು ಬಂಧಿಸಲಾಗಿದ್ದು, ತನ್ವೀರ್​ನನ್ನು ಹೊರತುಪಡಿಸಿ ಬೇರೆ ಯಾರೂ ಕಲ್ಲು ತೂರಾಟ ಮಾಡಿಲ್ಲವೆಂದು ಆತನೇ ಒಪ್ಪಿಕೊಂಡಿರುವುದಾಗಿ ಎಸ್ಪಿ ಹೇಳಿದ್ದಾರೆ. ಈ ಗಲಾಟೆ ಪೂರ್ವ ಯೋಜಿತವಾಗಿದ್ದಲ್ಲ ಮತ್ತು ಡಿಜೆ ವಿಚಾರಕ್ಕಾಗಿಯಾಗಿ ಕಲ್ಲು ತೂರಾಟ ನಡೆದಿಲ್ಲ. ರಾತ್ರಿ ಸುಮಾರು 10 ಗಂಟೆ 6 ನಿಮಿಷಕ್ಕೆ ಕಲ್ಲು ತೂರಾಟವಾಗಿದ್ದು, ಈ ವೇಳೆ ನನಗೆ ಮತ್ತು ಇಬ್ಬರು ಕಾನ್ಸ್​ಟೇಬಲ್​ಗಳಿಗೆ ಗಾಯಗಳಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ. ಕಲ್ಲು ತೂರಾಟದ ಜೊತೆ ಚಪ್ಪಲಿಯನ್ನು ಕೂಡ ಎಸೆಯಲಾಗಿದೆ. ಮಸೀದಿ ಒಳಗೆ ಕಲ್ಲಿನಿಂದ ಶೂ ರ್ಯಾಕ್ ಮಾಡಲಾಗಿತ್ತು. ಅದೇ ಕಲ್ಲು ತೆಗೆದುಕೊಂಡು ತೂರಾಟ ನಡೆಸಲಾಗಿದೆ. ಮಸೀದಿಯೊಳಗೆ ಯಾವುದೇ ರಾಡ್ ಆಗಲಿ ಬೇರೆ ಅಸ್ತ್ರವಾಗಲಿ ಇರಲಿಲ್ಲ. ಗಲಾಟೆ ಹಿನ್ನೆಲೆ ಬಿಎನ್​​ಎಸ್​​​​​​​ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬಾಗಲಕೋಟೆ ಎಸ್​​​ಪಿ ಸಿದ್ಧಾರ್ಥ ಗೋಯಲ್ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image