
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ನಡೆಯುವಾಗ ಸ್ಪೋಟಕ ತಿರುವು ಸಿಕ್ಕಿದೆ. ಪ್ರಕರಣದ ಮಹಜರ್ ಮಾಡುವ ವೇಳೆ ಎಡವಟ್ಟು ಮಾಡಿರುವುದಾಗಿ ಆರೋಪಿಸಿ ತನಿಖಾಧಿಕಾರಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಕೋರ್ಟ್ ಇಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ A2 ಆರೋಪಿಯ ಪರ ವಕೀಲರಾದ ಸುಧನ್ವ ಅವರು ಅರ್ಜಿ ಸಲ್ಲಿಕೆ ಮಾಡಿ ಕೋರ್ಟ್ಗೆ ಮನವಿ ಮಾಡಿದ್ದಾರೆ.
ತನಿಖಾಧಿಕಾರಿ ಗಿರೀಶ್ ನಾಯಕ್ ಆರೋಪಿಗಳ ಮೊಬೈಲ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿರುವುದಾಗಿ ಉಲ್ಲೇಖ ಮಾಡಿ ಪೋಟೊ ಪ್ರತಿಗಳನ್ನ ಸಲ್ಲಿಕೆ ಮಾಡಿದ್ದಾರೆ. ಆದ್ರೆ ಮಹಜರ್ ವೇಳೆ ಆರೋಪಿಗಳನ್ನ ಟೈಲ್ಸ್ ಹಾಕಿರುವ ಕ್ಯಾಬಿನ್ ಅಲ್ಲಿ ನಿಲ್ಲಿಸಿ ಪೋಟೊ ತೆಗೆದಿದ್ದಾರೆ. ಆದ್ರೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಟೈಲ್ಸ್ ಹಾಕಿರುವ ಫ್ಲೊರಿಂಗ್ ಇಲ್ಲ ಎಂದು ಅರ್ಜಿಯಲ್ಲಿ ವಕೀಲರು ಆರೋಪ ಮಾಡಿದ್ದಾರೆ. ಬೇರೆ ಯಾವುದೋ ಜಾಗದಲ್ಲಿ ನಿಲ್ಲಿಸಿ ಪೋಟೊ ತೆಗೆದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಎಂದು ತೋರಿಸಿದ್ದಾರೆ. ಹೀಗಾಗಿ ತನಿಖಾಧಿಕಾರಿ ಗಿರೀಶ್ ನಾಯಕ್ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ವಂತೆ ವಾದ ಮಾಡಿಸಿದ್ರು. ಅರ್ಜಿ ಪರಿಶೀಲನೆ ನಡೆಸಿದ CCH-64 ವಕೀಲರ ಸಮ್ಮುಖದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯನ್ನ ಪರಿಶೀಲನೆ ನಡೆಸಿ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ.






Be the first to comment
Leave a Reply