ಟಿ20 ವಿಶ್ವಕಪ್ ಸೂಪರ್-8 ಪಂದ್ಯಗಳ ವೇಳಾಪಟ್ಟಿ, ದಿನಾಂಕ, ತಾಣಗಳ ಮಾಹಿತಿ

T20 World Cup Super Eights schedule:ಸೂಪರ್ 8ರ ಹಂತದಲ್ಲಿ ಭಾರತ ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಫೆ. 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಂತರ ಫೆ. 26ರಂದು ಚೆನ್ನೈಯಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ.

ಹಾಲಿ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ‘ಸೂಪರ್ 8’ರ ಹಂತಕ್ಕೆ ವೇದಿಕೆ(T20 World Cup Super Eights schedule) ಸಿದ್ದಗೊಂಡಿದೆ. ಬುಧವಾರ ಕೊಲಂಬೊದಲ್ಲಿ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಮೀಬಿಯಾವನ್ನು ಸೋಲಿಸುವ ಮೂಲಕ ಸೂಪರ್‌-8 ತಂಡಗಳು ಅಂತಿಗೊಂಡಿತು. ಆತಿಥೇಯ ಭಾರತ ತಂಡವು ಸೂಪರ್ ಎಂಟು ಹಂತದ ಮೊದಲ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಪಂದ್ಯಗಳ ವೇಳಾಪಟ್ಟಿ ಮತ್ತು ಗುಂಪುಗಳ ಮಾಹಿತಿ ಇಲ್ಲಿದೆ.

ಫೆಬ್ರವರಿ 21ರಿಂದ ಮಾರ್ಚ್ 1ರವರೆಗೆ ಸೂಪರ್ 8 ಹಂತದ ಪಂದ್ಯಗಳು ನಿಗದಿಯಾಗಿವೆ. ಮಾರ್ಚ್ 4 ಹಾಗೂ 5ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಮಾರ್ಚ್ 8ರಂದು ನಡೆಯಲಿದೆ.

ಸೂಪರ್ 8ರ ಹಂತದಲ್ಲಿ ಭಾರತ ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಫೆ. 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಂತರ ಫೆ. 26ರಂದು ಚೆನ್ನೈಯಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ. ತನ್ನ ಕೊನೆಯ ಪಂದ್ಯದಲ್ಲಿ ಮಾ.1ರಂದು ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಸೂಪರ್-8 ಗುಂಪುಗಳು

ಗುಂಪು 1: ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ.

ಗುಂಪು 2: ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್.

ಸೂಪರ್‌-8 ಪಂದ್ಯಗಳ ವೇಳಾಪಟ್ಟಿ

ನ್ಯೂಜಿಲೆಂಡ್ vs ಪಾಕಿಸ್ತಾನ- ಫೆ. 21(ಕೊಲಂಬೊ)

ಇಂಗ್ಲೆಂಡ್ vs ಶ್ರೀಲಂಕಾ- ಫೆ. 22(ಕ್ಯಾಂಡಿ)

ಭಾರತ vs ದಕ್ಷಿಣ ಆಫ್ರಿಕಾ- ಫೆ. 22(ಅಹಮದಾಬಾದ್)

ಜಿಂಬಾಬ್ವೆ vs ವೆಸ್ಟ್ ಇಂಡೀಸ್- ಫೆ. 23(ಮುಂಬೈ)

ಇಂಗ್ಲೆಂಡ್ vs ಪಾಕಿಸ್ತಾನ- ಫೆ. 24(ಕ್ಯಾಂಡಿ)

ನ್ಯೂಜಿಲೆಂಡ್ vs ಶ್ರೀಲಂಕಾ- ಫೆ. 25(ಕೊಲಂಬೊ)

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ- ಫೆ. 26(ಅಹಮದಾಬಾದ್)

ಭಾರತ vs ಜಿಂಬಾಬ್ವೆ- ಫೆ.26(ಚೆನ್ನೈ)

ಇಂಗ್ಲೆಂಡ್ vs ನ್ಯೂಜಿಲೆಂಡ್- ಫೆ. 27(ಕೊಲಂಬೊ)

ಪಾಕಿಸ್ತಾನ vs ಶ್ರೀಲಂಕಾ- ಫೆ.28(ಕ್ಯಾಂಡಿ)

ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ- ಮಾ. 1 (ನವದೆಹಲಿ)

ಭಾರತ vs ವೆಸ್ಟ್ ಇಂಡೀಸ್- ಮಾ. 1 (ಕೋಲ್ಕತ್ತಾ)

Be the first to comment

Leave a Reply

Your email address will not be published. Required fields are marked *

ad image