
Tejaswi Surya-Sergio Gor: ಅಮೆರಿಕನ್ ಅಂಬಾಸಿಡರ್ ಜೊತೆ ತೇಜಸ್ವಿ ಸೂರ್ಯ ಮಧ್ಯರಾತ್ರಿ ಆಟೋ ಸಂಚಾರ, ಗರಿಗರಿ ದೋಸೆ ಜೊತೆ ಒಪ್ಪಿಗೆ ಆಯ್ತು ಮಹತ್ವದ ನಿರ್ಧಾರ!
Sergio Gor and Tejasvi Surya Auto Ride: ಬಿಜೆಪಿ ಸಂಸದರು ಹಂಚಿಕೊಂಡಿರುವ ವೀಡಿಯೊದಲ್ಲಿ ಇಬ್ಬರು ನಗರದ ಬೀದಿಗಳಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸಲಾಗಿದೆ, ಒಂದು ಹಂತದಲ್ಲಿ ಗೋರ್ ತಮ್ಮ ಫೋನ್‌ನಲ್ಲಿ ರಸ್ತೆಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ.
ಬೆಂಗಳೂರು: ಭಾರತದ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya-Sergio Gor Auto Ride) ಅವರೊಂದಿಗೆ ನಿನ್ನೆ ತಡರಾತ್ರಿ ಆಟೋ ಸಂಚಾರ ಮಾಡಿ ಬೆಂಗಳೂರು ಸುತ್ತಿದ್ದಾರೆ.
ಈ ಸಂಬಂಧ ಸಂಸದ ತೇಜಸ್ವಿ ಸೂರ್ಯ ಅವರು ತಡರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆ ಪೋಸ್ಟ್‌ನಲ್ಲಿ ಇಬ್ಬರು ನಗರದ ಬೀದಿಗಳಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸಲಾಗಿದೆ, ಗೋರ್ ತಮ್ಮ ಫೋನ್‌ನಲ್ಲಿ ರಸ್ತೆಗಳನ್ನು ರೆಕಾರ್ಡ್ ಮಾಡುತ್ತಿರುವ ದೃಶ್ಯ ಕೂಡ
ವಿಡಿಯೋದಲ್ಲಿ ಸೆರೆಯಾಗಿದೆ.
ನಂತರ ಇನ್ನರೂ ಕೂಡ ನಗರದ ಹೊಟೆಲ್ ಒಂದರಲ್ಲಿ ಆಹಾರವನ್ನು ಸೇವಿಸಿ ಮಾತುಕತೆಯಲ್ಲಿ ತೊಡಗಿರುವ ಫೋಟೋ ಕೂಡ ತೇಜಸ್ವಿ ಸೂರ್ಯ ಅಪ್ಲೋಡ್ ಮಾಡಿದ್ದಾರೆ. ಸಂಭಾಷಣೆ ವೇಳೆ ಇಬ್ಬರೂ ಭಾರತ-ಅಮೆರಿಕ ಪಾಲುದಾರಿಕೆಯ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.






Be the first to comment
Leave a Reply