ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಪುತ್ರ ತ್ರಿಶಾಲ್ ರಾಜ್ (13) ನೆನೆದು ನಗರದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರು ನಿನ್ನೆ (ಗುರುವಾರ) ಭಾವುಕ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಮಗನ ಕುರಿತು ಮತ್ತೊಂದು ಬರಹವನ್ನು ಹಂಚಿಕೊಂಡಿದ್ದಾರೆ.

ತುಮಕೂರು: ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಪುತ್ರ ತ್ರಿಶಾಲ್ ರಾಜ್ (13) ನೆನೆದು ನಗರದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರು ನಿನ್ನೆ (ಗುರುವಾರ) ಭಾವುಕ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಮಗನ ಕುರಿತು ಮತ್ತೊಂದು ಬರಹವನ್ನು ಹಂಚಿಕೊಂಡ ಅವರು ತಮ್ಮ ಮಗನಿಗೆ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ. ತ್ರಿಶಾಲ್ ರಾಜ್ ಡೆತ್‌ನೋಟ್‌ನಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದ ಆತನಿಗೆ ಮಾನಸಿಕ ಹಿಂಸೆ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಡೆತ್‌ನೋಟ್‌ನಲ್ಲೇನಿತ್ತು?
ಮೃತ ಬಾಲಕ ತನ್ನ ಡೆತ್‌ನೋಟ್‌ನಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಿದ್ದ. ಮೊದಲು 14,000 ಕೇಳಿದರು ನಂತರ 7,000 ಕೇಳಿದ್ರು ಈಗ 4500 ಸಾವಿರ ಕೇಳ್ತಾ ಇದ್ದಾರೆ. ನನಗೆ ಸಾಕಾಗಿ ಹೋಗಿದೆ. ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು, ಹೆದರಿಸುತಿದ್ದರು. ದಯವಿಟ್ಟು ಕ್ಷಮಿಸು ಅಕ್ಕನನ್ನು ತುಂಬಾ ಚೆನ್ನಾಗಿ ನೋಡಿಕೋ. ಯಾರೂ ಅಳಬೇಡಿ ಅಂತೆಲ್ಲ ಪುಟ್ಟ ಕೈಗಳಿಂದ ಬರೆದು ಸಾವಿನ ದಾರಿ ಹಿಡಿದು ಬಿಟ್ಟಿದ್ದ. ನಾನು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿ ಇದ್ದಿದ್ದು ಗೊತ್ತಿದ್ದ ನನ್ನ ಕಂದ ನನ್ನ ಫೀಸ್ ಕಟ್ಟಬೇಡ ಅಮ್ಮ ನೀನು ಕಷ್ಟದಲ್ಲಿದ್ದೀಯಾ ಅಂತನು ಬರೆದಿತ್ತು.”ಪ್ರತಿಯೊಂದು ಸಣ್ಣ ಸಣ್ಣ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ನನ್ನ ಮಗ ಅವರು ಅಷ್ಟು ಚಿತ್ರ ಹಿಂಸೆ ಕೊಟ್ಟರು ಯಾವುದನ್ನೂ ನನ್ನ ಹತ್ತಿರ ಹೇಳಿಕೊಂಡಿಲ್ಲ ಏಕೆ ಅನ್ನೋದು ನನಗೆ ಇಂದಿಗೂ ಯಕ್ಷಪ್ರಶ್ನೆಯಾಗಿದೆ? ಎಂದು ಅವರು ಹೇಳಿದ್ದಾರೆ.
ಶಕುಂತಲಾ ನಟರಾಜ್ ಪೋಸ್ಟ್‌ನಲ್ಲೇನಿದೆ?
ಆದರೆ ಅವನ ಸಾವಿನಲ್ಲಿ ಕೆಲವೊಂದು ಅತೃಪ್ತ ಆತ್ಮಗಳು ಮೀಡಿಯಾ ಮೂಲಕ ಪಾರಿವಾಳ ಬೆಟ್ಟಿಂಗ್ನಿಂದ ಸತ್ತ ಎಂಬ ಸುದ್ದಿಯನ್ನು ಹಬ್ಬಿಸಿಬಿಟ್ಟಿದ್ದವು. ನಾನು ಎಲ್ಲೂ ಆ ವಿಚಾರವಾಗಿ ಹೇಳಿಲ್ಲ ನನ್ನ ಮಗ ತನ್ನ ಡೆತ್ ನೋಟಲ್ಲಿಯೂ ಪಾರಿವಾಳ ಬೆಟ್ಟಿಂಗ್ ಅಂತ ಬರೆದಿಲ್ಲ, ಪೊಲೀಸ್ನವರು ಕೂಡ ಇದನ್ನು ಸ್ಪಷ್ಟಪಡಿಸಿಲ್ಲ. ಆದರೆ ಶವಗಾರದ ಮುಂದೆ ನಿಂತು ಒಬ್ಬ ಮಹಾನುಭಾವ ಪುಣ್ಯಾತ್ಮ ತನ್ನನ್ನು ತಾನು ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ಬಿಂಬಿಸಿಕೊಳ್ಳುವ ವ್ಯಕ್ತಿ ಮಾಧ್ಯಮದ ಮುಂದೆ ಯಾವ ಉದ್ದೇಶದಿಂದ ಯಾರನ್ನು ಓಲೈಸಲು, ಯಾರನ್ನು ತೃಪ್ತಿಪಡಿಸಲು ಈ ಹೇಳಿಕೆಯನ್ನು ನೀಡಿದರೋ ನನಗೆ ಗೊತ್ತಿಲ್ಲ. ಅಥವಾ ನನಗೆ ತಿಳಿಯದೆ ಅವರಿಗೆ ಯಾವ ಗುಪ್ತಚರ ವರದಿ ನನ್ನ ಮಗ ಪಾರಿವಾಳ ಬೆಟ್ಟಿಂಗ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೇ ಎಂದು ತಿಳಿಸಿತ್ತೋ ಗೊತ್ತಿಲ್ಲ . ಆದರೆ ಹಿಂದೂ- ಮುಂದು ಯೋಚನೆ ಮಾಡದೆ ನನ್ನ ಎದುರಿಗೆ ಬಂದು ಮಾಧ್ಯಮದ ಮುಂದೆ ಹೇಳಿಬಿಟ್ಟರು. ನಾನು ಇಲ್ಲ ಎಂದು ವಾದಿಸಿದರು ಸಹ ಎರಡು ಬಾರಿ ಉಚ್ಚರಿಸಿದ ಪದವನ್ನು ಮಾನವೀಯತೆ ಇಲ್ಲದ ಮಾಧ್ಯಮದವರು ಯಥಾವತ್ತಾಗಿ ಬಿತ್ತರಿಸಿಬಿಟ್ಟವು. 12 ವರ್ಷದ ನನ್ನ ಮಗುವಿಗೆ ‘ಬೆಟ್ಟಿಂಗ್’ ಎಂಬ ಪಟ್ಟವನ್ನು ಕಟ್ಟಿ ಈ ಕಳಿಸಿಕೊಟ್ಟರು
ಪೋಲಿಸ್ ನವರು ಎಫ್ಐಆರ್ ಮಾಡಿದ್ರು ಸಹ ನಾಲ್ಕು ತಿಂಗಳಾದರೂ ಕೋರ್ಟಿಗೆ ಚಾರ್ಶೀಟ್ ಸಲ್ಲಿಕೆ ಮಾಡಲೇ ಇಲ್ಲ. ಅಷ್ಟರಲ್ಲಿ ಏಪ್ರಿಲ್ ಒಂದನೇ ತಾರೀಕು ಈ ಕೇಸ್ ಗೆ ಹೈಕೋರ್ಟ್ ನಿಂದ ಆದಿತ್ಯನಾ ಕಡೆಯ ವಕೀಲರು ‘ಸ್ಟೇ’ ತರುತ್ತಾರೆ. ಅಲ್ಲಿಗೆ ನನ್ನ ಮಗನ ಕೇಸ್ ಧೂಳು ಹಿಡಿದ ಫೈಲ್ ಆಗಿ ಪೊಲೀಸ್ ಸ್ಟೇಶನ್ನ ಯಾವುದೋ ಮೂಲೆಯಲ್ಲಿ ಬಿದ್ದಿದೆ. ಯಾವುದೇ ಇನ್ವೆಸ್ಟಿಗೇಷನ್ ಆಗಲ್ಲ, ಆದಿತ್ಯ ಒಬ್ಬ ಪುಡಿ ರೌಡಿ ಆಗಿದ್ದ, ಅವನು ಯಾರ ಸಂಪರ್ಕದಲ್ಲಿದ್ದ,ನನ್ನ ಮಗನನ್ನು ಏಕೆ ಟಾರ್ಗೆಟ್ ಮಾಡಿದ, ಇದರ ಹಿಂದೆ ಯಾವುದಾದರು ಕಾಣದ ಕೈಗಳ ಕೈವಾಡವಿದೆಯೇ? ಯಾವುದಕ್ಕೂ ಉತ್ತರ ನನ್ನ ಬಳಿ ಇಲ್ಲ ಎಂದು ಶಕುಂತಲಾ ನಟರಾಜ್ ಬರೆದುಕೊಂಡಿದ್ದಾರೆ.






Be the first to comment
Leave a Reply