Toxic teaser release.. ಹೊಸ ಲುಕ್​ನಲ್ಲಿ ಯಶ್​.. ಫ್ಯಾನ್ಸ್​ ಫಿದಾ!

Toxic teaser release.. ಹೊಸ ಲುಕ್​ನಲ್ಲಿ ಯಶ್​.. ಫ್ಯಾನ್ಸ್​ ಫಿದಾ!

ರಾಕಿಂಗ್ ಸ್ಟಾರ್ ಯಶ್ (Rocking Star Yash) ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕೆಜಿಎಫ್ ನಂತರ ಯಶ್ ಅವ್ರ ಟಾಕ್ಸಿಕ್ ಸಿನಿಮಾ ಹೇಗಿರುತ್ತೆ ಎಂಬ ಕುತೂಹಲಕ್ಕೆ ಟೀಸರ್ ಕೊಟ್ಟಿದೆ. ‘ಗ್ಲೋಬಲ್’ ಲೆವೆಲ್​ನಲ್ಲಿ ಧೂಳೆಬ್ಬಿಸೋದು ಗ್ಯಾರಂಟಿ ಅನ್ನೋದನ್ನ ಟೀಸರ್​ ಸಾಬೀತು ಮಾಡಿದೆ.

Toxic teaser release.. ಹೊಸ ಲುಕ್​ನಲ್ಲಿ ಯಶ್​.. ಫ್ಯಾನ್ಸ್​ ಫಿದಾ!

ಇದುವರೆಗೂ ಉದ್ದ ಕೂದಲು, ದಟ್ಟ ಗಡ್ಡದಲ್ಲಿ ರಾಕಿಭಾಯ್ ಆಗಿ ಅಬ್ಬರಿಸಿದ್ದ ಯಶ್, ‘ಟಾಕ್ಸಿಕ್’ನಲ್ಲಿ ಕಂಪ್ಲೀಟ್ ಮೇಕ್ ಓವರ್ ಆಗಿದ್ದಾರೆ. ಟೀಸರ್‌ನಲ್ಲಿ ಯಶ್ ಅವರ ಶಾರ್ಟ್ ಹೇರ್ (Short Hair) ಮತ್ತು ಶಾರ್ಟ್ ಬಿಯರ್ಡ್ (Short Beard) ಲುಕ್ ಪ್ರೇಕ್ಷಕರಿಗೆ ಹೊಸ ಫೀಲ್ ಕೊಡುತ್ತಿದೆ. ರಾಯನ ಪಾತ್ರದಲ್ಲಿ ಯಶ್ ಸಖತ್ ಸ್ಟೈಲಿಶ್ ಆಗಿ, ಅಷ್ಟೇ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.

Toxic teaser release.. ಹೊಸ ಲುಕ್​ನಲ್ಲಿ ಯಶ್​.. ಫ್ಯಾನ್ಸ್​ ಫಿದಾ!

ಚಿತ್ರತಂಡ ಮೊದಲೇ ಹೇಳಿದಂತೆ ಇದೊಂದು ‘ಗ್ಲೋಬಲ್ ಲೆವೆಲ್’ ಸಿನಿಮಾ ಎಂಬುದು ಟೀಸರ್‌ನ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತಿದೆ. ಲೈಟಿಂಗ್, ಕ್ಯಾಮೆರಾ ವರ್ಕ್ ಮತ್ತು ಬಣ್ಣಗಳ ಸಂಯೋಜನೆ ಹಾಲಿವುಡ್ ಆಕ್ಷನ್ ಸಿನಿಮಾಗಳನ್ನು ನೆನಪಿಸುವಂತಿದೆ. ಈ ಹಿಂದೆ ಕೇವಲ ರಾಯನ (ಯಶ್) ಪಾತ್ರದ ಗ್ಲಿಂಪ್ಸ್ ಮಾತ್ರ ಬಿಡುಗಡೆಯಾಗಿತ್ತು. ಈ ಅಧಿಕೃತ ಟೀಸರ್‌ನಲ್ಲಿ ಸಿನಿಮಾದ ಇತರ ಪ್ರಮುಖ ಪಾತ್ರಗಳ ಝಲಕ್ ಕೂಡ ಇದೆ. ನಾಯಕಿ ಮತ್ತು ಖಳನಾಯಕರ ಪ್ರಪಂಚ ಹೇಗಿರಲಿದೆ ಎಂಬುದರ ಸಣ್ಣ ಸುಳಿವನ್ನು ನಿರ್ದೇಶಕರು ಬಿಟ್ಟುಕೊಟ್ಟಿದ್ದಾರೆ.

ಒಟ್ಟಿನಲ್ಲಿ ‘ಟಾಕ್ಸಿಕ್’ ಟೀಸರ್ ನಿರೀಕ್ಷೆಗೂ ಮೀರಿದೆ. ಯಶ್ ಅವರ ಸ್ಟೈಲ್, ಗೀತು ಮೋಹನ್‌ದಾಸ್ ಅವರ ಮೇಕಿಂಗ್ ವಿಷನ್ ಮತ್ತು ಸಿನಿಮಾದ ಅದ್ಧೂರಿತನ ನೋಡಿದರೆ, ಬಾಕ್ಸ್ ಆಫೀಸ್‌ನಲ್ಲಿ ಮತ್ತೊಮ್ಮೆ ಸುನಾಮಿ ಏಳುವುದು ಪಕ್ಕಾ ಎನಿಸುತ್ತಿದೆ.

Be the first to comment

Leave a Reply

Your email address will not be published. Required fields are marked *

ad image