‘ಟಾಕ್ಸಿಕ್’ನಲ್ಲಿ ಯಶ್ ಪಾತ್ರದ ಹೆಸರು ಟಿಕೆಟ್; ಮಾಸ್ಟರ್ ಪ್ಲ್ಯಾನ್ ಮಾಡಿದ ರಾಕಿಂಗ್ ಸ್ಟಾರ್

‘ಟಾಕ್ಸಿಕ್’ನಲ್ಲಿ ಯಶ್ ಪಾತ್ರದ ಹೆಸರು ಟಿಕೆಟ್; ಮಾಸ್ಟರ್ ಪ್ಲ್ಯಾನ್ ಮಾಡಿದ ರಾಕಿಂಗ್ ಸ್ಟಾರ್’

 

‘ಟಾಕ್ಸಿಕ್’ ಟೀಸರ್ ಯಶ್ ದ್ವಿಪಾತ್ರದಿಂದ ಗಮನ ಸೆಳೆದಿದೆ. ನಯನತಾರ, ಕಿಯಾರಾ ಅಡ್ವಾಣಿ ಸೇರಿ ನಾಯಕಿಯರು ಟೀಸರ್‌ನಲ್ಲಿ ಕಾಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಯಶ್ ಅವರೇ ಕುತೂಹಲ ಹೆಚ್ಚಿಸಲು ರೂಪಿಸಿದ ಮಾಸ್ಟರ್ ಪ್ಲಾನ್ ಎನ್ನಲಾಗಿದೆ. ಬೋಲ್ಡ್ ದೃಶ್ಯಗಳಿಗಾಗಿ ಮೊದಲಿನಿಂದಲೂ ಟೀಕೆ ಎದುರಿಸುತ್ತಿರುವ ಈ ಸಿನಿಮಾ, ನಾಯಕಿಯರ ಅದೃಶ್ಯತೆಯ ಮೂಲಕ ಇನ್ನಷ್ಟು ಚರ್ಚೆ ಹುಟ್ಟುಹಾಕಿದೆ.

Yash-Toxic

‘ಟಾಕ್ಸಿಕ್’ ಟೀಸರ್ (Toxic Teaser) ಸದ್ಯ ಹಲ್​ಚಲ್ ಸೃಷ್ಟಿ ಮಾಡುತ್ತಿದೆ. ಈ ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿದ್ದಾರೆ. ಯಶ್ ಅವರ ದ್ವಿಪಾತ್ರ ಸಾಕಷ್ಟು ಗಮನ ಸೆಳೆದಿದೆ. ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿಕೊಂಡಿದ್ದು ಏಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಯನಾತಾರ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅಂಥವರು ನಟಿಸಿದ್ದಾರೆ. ಆದರೆ, ಇವರನ್ನು ಟೀಸರ್​ ಅಲ್ಲಿ ತೋರಿಸಿಯೇ ಇಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಆದರೆ, ಇದರ ಹಿಂದೆ ಮಾಸ್ಟರ್​ ಪ್ಲ್ಯಾನ್ ಇದೆ ಎಂದು ವರದಿ ಆಗಿದೆ.

ಯಶ್ ಜನ್ಮದಿನಕ್ಕೆ ರಿಲೀಸ್ ಆದ ‘ಟಾಕ್ಸಿಕ್’ ಟೀಸರ್​ ಅಲ್ಲಿ ಬೋಲ್ಡ್ ದೃಶ್ಯಗಳು ಇದ್ದವು. ಈ ಕಾರಣಕ್ಕೆ ಅವರು ಟೀಕೆ ಎದುರಿಸಿದರು. ರಿಲೀಸ್ ಆದ ಎರಡನೇ ಟೀಸರ್​ ಅಲ್ಲಿಯೂ ಬೋಲ್ಡ್ ದೃಶ್ಯಗಳು ಇವೆ. ಈ ವಿಷಯದಲ್ಲಿ ಟೀಕೆ ಎದುರಿಸುತ್ತಿದ್ದಾರೆ. ಎಲ್ಲಕಿಂತ ಮುಖ್ಯವಾಗಿ ಟೀಸರ್​​ನಲ್ಲಿ ಯಶ್​ಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಪಾತ್ರದ ಹೆಸರು ರಾಯ ಆದರೆ, ಮತ್ತೊಂದು ಪಾತ್ರದ ಹೆಸರು ರಾಯ. ಈ ಪಾತ್ರ ರಿಲೀಸ್ ಆಗಿ ಗಮನ ಸೆಳೆದಿದೆ. ಹೀರೋಯಿಗಳನ್ನು ಟೀಸರ್ ಅಲ್ಲಿ ತೋರಿಸದೇ ಇರಲು ಕೆಲವರು ಬೇರೆ ರೀತಿಯಲ್ಲಿ ಹೇಳುತ್ತಿದ್ದಾರೆ. .

ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದಾಗ ಟೀಸರ್ ಹಾಗೂ ಸಿನಿಮಾದಲ್ಲಿ ಬಹುತೇಕ ಎಲ್ಲ ವಿಷಯಗಳನ್ನು ತೋರಿಸಲಾಗುತ್ತದೆ. ಸಿನಿಮಾದಲ್ಲಿ ಯಾವ ಕಲಾವಿದರ ಪಾತ್ರ ಯಾವ ರೀತಿ ಇದೆ? ಸಿನಿಮಾ ಎಳೆ ಏನು ಎಂಬುದನ್ನು ತಿಳಿಸಲಾಗುತ್ತದೆ. ಆದರೆ, ‘ಟಾಕ್ಸಿಕ್’ ಟೀಸರ್​ನಲ್ಲಿ ಪ್ರಮುಖವಾಗಿ ತೋರಿಸಿದ್ದು, ಯಶ್ ದ್ವಿಪಾತ್ರದ ಕಥೆ ಮಾತ್ರ. ಇದಕ್ಕೆ ಯಶ್ ಅವರ ಪ್ಲ್ಯಾನ್ ಕಾರಣವಂತೆ.

ಇದನ್ನೂ ಓದಿ: ಮುಂಬೈ ಬೀದಿಗಳಲ್ಲಿ ಯಶ್ ಮುಖ ಮುಚ್ಚಿಕೊಂಡು ಓಡಾಡಿದ್ದಕ್ಕೆ ‘ಟಾಕ್ಸಿಕ್ ಟೀಸರ್​​ನಲ್ಲಿ ಸಿಕ್ತು ಉತ್ತರ

ಎಲ್ಲಾ ಸಿನಿಮಾಗಳ ರೀತಿಯಲ್ಲಿ ಟೀಸರ್ ಇರಬಾರದು ಎಂದು ಯಶ್ ನಿರ್ಧರಿಸಿದ್ದರು. ನಯನತಾರಾ, ಕಿಯಾರಾ ಅಡ್ವಾಣಿ ಮಾಡಿರೋ ಪಾತ್ರಗಳ ಬಗ್ಗೆ ಕುತೂಹಲ ಇದೆ. ಟ್ರೇಲರ್​ವರೆಗೂ ಈ ಕುತೂಹಲ ಸಾಗಬೇಕು ಎಂಬುದು ಯಶ್ ಪ್ಲ್ಯಾನ್ ಹೀಗಾಗಿ, ಟ್ರೇಲರ್ ರಿಲೀಸ್ ಆಗುವವರೆಗೂ ಕಾಯಬೇಕಾದ ಅನಿವಾರ್ಯತೆ ಅಭಿಮಾನಿಗಳಿಗೆ ಇದೆ. ಈಗಿನ ಯುಗದಲ್ಲಿ ನೆಗೆಟಿವೋ ಅಥವಾ ಪಾಸಿಟಿವೋ ಚರ್ಚೆ ಆದರೆ ಸಾಕು ಎಂದು ಅನೇಕರು ಭಾವಿಸುತ್ತಾರೆ. ಯಶ್ ಕೂಡ ಇದೇ ರೀತಿಯ ಪ್ಲ್ಯಾನ್ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ. ‘ಟಾಕ್ಸಿಕ್’ ಮೊದಲ ಟೀಸರ್​ ಅಲ್ಲಿ ಬೋಲ್ಡ್ ದೃಶ್ಯದ ಕಾರಣಕ್ಕೆ ಚರ್ಚೆ ಆಯಿತು. ಈ ಬಾರಿ ಹೀರೋಯಿನ್​​ಗಳ ಪರಿಚಯಿಸಿಲ್ಲ ಎಂಬ ಕಾರಣಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿನಿಮಾ ಬಗ್ಗೆ ಚರ್ಚೆಯಂತೂ ಇದ್ದೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Be the first to comment

Leave a Reply

Your email address will not be published. Required fields are marked *

ad image