ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್

ಮಗಳ ಹುಟ್ಟುಹಬ್ಬ ಆಚರಣೆಗೆ ದುಬೈ ಪ್ರವಾಸ: ಬೆಂಗಳೂರಿನ ದಂಪತಿ ಅಬುಧಾಬಿಯಲ್ಲಿ ಲಾಕ್

ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧದ (Iran-Israel Airstrike) ಪರಿಣಾಮ ಮಗಳ ಹುಟ್ಟುಹಬ್ಬ ಆಚರಣೆಗೆಂದು ದುಬೈ (Dubai) ಪ್ರವಾಸಕ್ಕೆ ಹೋಗಿದ್ದ ಬೆಂಗಳೂರಿನ ದಂಪತಿ (Couple) ಅಬುಧಾಬಿಯಲ್ಲಿ (Abu Dhabi) ಲಾಕ್ ಆಗಿದ್ದಾರೆ. ಕಿರಣ್ ಮತ್ತು ಸುನೀತ ದಂಪತಿ ಮಗಳ ಹುಟ್ಟುಹಬ್ಬವನ್ನ ಅವಿಸ್ಮರಣೀಯವಾಗಿ ಆಚರಿಸಲು ಫೆ.23ರಂದು ಬೆಂಗಳೂರಿನಿಂದ ದುಬೈ ಪ್ರವಾಸ ಕೈಗೊಂಡಿದ್ದರು. ಬುರ್ಜ್ ಖಲೀಫಾ ಮುಂದೆ ಮಗಳ ಬರ್ತ್‌ಡೇಯನ್ನ ದಂಪತಿ ಆಚರಿಸಿದ್ದರು. ಶನಿವಾರ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಆಗಿತ್ತು. ಶನಿವಾರ ಮಧ್ಯಾಹ್ನ ಅಬುಧಾಬಿ ಏರ್‌ಪೋರ್ಟ್‌ಗೆ ಆಗಮಿಸಿ, ಇಮಿಗ್ರೇಷನ್ ಕೂಡ ಮುಗಿಸಿ ಇನ್ನೇನು ವಿಮಾನದಲ್ಲಿ ವಾಪಸ್ ಭಾರತಕ್ಕೆ ಬರಬೇಕಾಗಿತ್ತು. ಆದರೆ ಅಷ್ಟರಲ್ಲಿ ಮಿಸೈಲ್ ದಾಳಿ ಶುರು ಆಗಿ ವಾಪಸ್ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದಾರೆ.

ಸೇಫ್ ಆಗಿ ನಮ್ಮ ನಾಡಿಗೆ ಬಂದರೆ ಸಾಕು ಎಂದು ದಂಪತಿ ಪ್ರತಿಕ್ಷಣ ಭಯದಲ್ಲೇ ಸಮಯ ಕಳೆಯುತ್ತಿದ್ದಾರೆ. ಸುನೀತ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮನ್ನು ಅದಷ್ಟು ಬೇಗ ಸೇಫ್ ಆಗಿ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಮಗೆ ತುಂಬಾ ಭಯ ಆಗುತ್ತಿದೆ. ಅವತ್ತು ಫುಲ್ ಡೇ ಏರ್‌ಪೋರ್ಟ್ನಲ್ಲೇ ಇದ್ದೆವು. ಬಳಿಕ ಅಲ್ಲಿನ ಅಧಿಕಾರಿಗಳು ಹೋಟೆಲ್‌ಗೆ ಶಿಫ್ಟ್ ಮಾಡಿಸಿದ್ದಾರೆ. ಆದರೂ ಇಲ್ಲಿ ಭಯ ಆಗುತ್ತಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮನ್ನ ಅದಷ್ಟು ಬೇಗ ಸೇಫ್ ಆಗಿ ರಾಜ್ಯಕ್ಕೆ ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಸದ್ಯ ದಂಪತಿ ಯುದ್ಧ ಭಯದಲ್ಲೇ ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image