– ಯುದ್ಧ 4 ವಾರಗಳವರೆಗೆ ಮುಂದುವರಿಯಬಹುದು
ವಾಷಿಂಗ್ಟನ್: ಅಮೆರಿಕದ ಒಂದೇ ಹೊಡೆತದಲ್ಲಿ ಇರಾನ್‌ನ 48 ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ (Iran) ಮೇಲೆ ನಡೆಯುತ್ತಿರುವ ಅಮೆರಿಕ – ಇಸ್ರೇಲ್ ಜಂಟಿ ದಾಳಿ ಕುರಿತು ಮಾತನಾಡಿದ ಅವರು, ಈ ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಮತ್ತು ನಿರೀಕ್ಷೆಗಿಂತ ವೇಗವಾಗಿ ಮುಂದುವರಿದಿದೆ ಎಂದು ಬಣ್ಣಿಸಿದ್ದಾರೆ.
ನಿಜಕ್ಕೂ ನಾವು ಪಡೆಯುತ್ತಿರುವ ಯಶಸ್ಸು ನಂಬೋದಕ್ಕೆ ಸಾಧ್ಯವಾಗುತ್ತಿಲ್ಲ. ಒಂದೇ ಹೊಡೆತದಲ್ಲಿ 48 ಇರಾನ್‌ನ ನಾಯಕರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಮತ್ತಷ್ಟು ವೇಗವಾಗಿ ಸಾಗುತ್ತಿದೆ. ಇನ್ನೆಷ್ಟು ಗುರಿಗಳು ಬಾಕಿ ಉಳಿದಿವೆ ಅನ್ನೋದು ಕೂಡ ಅಮೆರಿಕಕ್ಕೆ ಸ್ಪಷ್ಟವಾಗಿ ಗೊತ್ತಿದೆ ಎಂದು ವಿವರಿಸಿದ್ದಾರೆ.
4 ವಾರಗಳಲ್ಲಿ ಮುಗಿಯಬಹುದು
ಮುಂದುವರಿದು ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ಅಮೆರಿಕ ಆರಂಭಿಸಿರುವ ಮಿಲಿಟರಿ ಕಾರ್ಯಾಚರಣೆ 4 ವಾರಗಳವರೆಗೆ ಮುಂದುವರಿಬಹುದು. ಆರಂಭದಿಂದಲೇ 4 ವಾರಗಳ ಪ್ರಕ್ರಿಯೆಯಾಗಿದೆ ಎಂದು ನಾವು ಅಂದಾಜಿಸಿದ್ದೆವು. ಇರಾನ್ ದೊಡ್ಡ ದೇಶವಾಗಿರುವುದರಿಂದ ಕಾರ್ಯಾಚರಣೆ ನಾಲ್ಕು ವಾರಗಳು ಅಥವಾ ಅದಕ್ಕಿಂತ ಕಡಿಮೆ ಅವಧಿ ತೆಗೆದುಕೊಳ್ಳಬಹುದು. ನಮ್ಮ ಉದ್ದೇಶಗಳು ಸಂಪೂರ್ಣವಾಗಿ ಸಾಧಿಸುವವರೆಗೆ ಯುದ್ಧ ಕಾರ್ಯಾಚರಣೆಗಳು ಪೂರ್ಣ ಬಲದಿಂದ ಮುಂದುವರಿಯುತ್ತವೆ ಎಂದು ಎಚ್ಚರಿಸಿದ್ದಾರೆ.







Be the first to comment
Leave a Reply