ಅಮೆರಿಕ- ಇಸ್ರೇಲ್‌ ದಾಳಿಗೆ ಇರಾನ್‌ನಲ್ಲಿ 176 ಮಕ್ಕಳು ಸೇರಿ 742 ಮಂದಿ ಬಲಿ

ಟೆಹ್ರಾನ್‌, ಮಾ.3- ಅಮೆರಿಕ ಹಾಗೂ ಇಸ್ರೇಲ್‌ ಸೇನೆಗಳ ಇರಾನ್‌ ಮೇಲಿನ ಮುಂದುವರೆದ ಸೇನಾ ಕಾರ್ಯಾಚರಣೆಗೆ 700 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ವತಃ ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆಯೇ ಈ ಮಾಹಿತಿ ನೀಡಿದೆ.

ನಿನ್ನೆ ಮಧ್ಯಾಹ್ನದ ಹೊತ್ತಿಗೆ ಇರಾನ್‌ನಲ್ಲಿ 176 ಮಕ್ಕಳು ಸೇರಿ ಕನಿಷ್ಠ 742 ನಾಗರಿಕರು ಸಾವಿಗೀಡಾಗಿದ್ದಾರೆ. 900ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲೇ ಕನಿಷ್ಠ 85 ಜನ ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿದೆ.

ಮತ್ತೊಂದೆಡೆ ಇರಾನ್‌, ಕೊಲ್ಲಿ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಮುಂದುವರಿಸಿದೆ. ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ತಿರುಗೇಟು ನೀಡುವುದಾಗಿ ಇರಾನ್‌ ಎಚ್ಚರಿಸಿತ್ತು.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ನಿವಾಸ ಸೇರಿದಂತೆ ಟೆಲ್‌ ಅವೀವ್‌, ಹೈಫಾ ಮತ್ತು ಪೂರ್ವ ಜೆರುಸಲೇಂನ ಹಲವು ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌್ಸ ಕೋರ್‌ ತಿಳಿಸಿದೆ. ಇಂದು ಬೆಳಿಗ್ಗೆ ಜೆರುಸಲೇಂನಲ್ಲಿ ಹಲವು ಬಾರಿ ಸ್ಫೋಟದ ಸದ್ದು ಕೇಳಿಸಿತ್ತು.

Be the first to comment

Leave a Reply

Your email address will not be published. Required fields are marked *

ad image