
ಬೆಂಗಳೂರು: ಕೆಎಂಎಫ್ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಆಗಿದ್ದು, ಕೆಎಂಎಫ್ ಉತ್ಪನ್ನಗಳು (KMF Products) ವಿದೇಶಗಳಿಗೂ ಸಪ್ಲೈ ಆಗುತ್ತೆ. ಆದ್ರೆ ಕೆಲ ದಿನಗಳಿಂದ ಕೆಎಂಎಫ್ ಉತ್ಪನ್ನಗಳ ಕುರಿತು ಅಪಪ್ರಚಾರದ ವಿಡಿಯೋ ವೈರಲ್ ಆಗ್ತಿದೆ. ಈ ರೀತಿ ಉತ್ಪನ್ನಗಳನ್ನ ಸೇವಿಸೋದ್ರಿಂದ ಕ್ಯಾನ್ಸರ್ ಬರುತ್ತೆಂದು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ ಎನ್ನುವ ಆರೋಪವಿದೆ. ಈ ವದಂತಿ ಬಗ್ಗೆ ಕೆಎಂಎಫ್ MD ಬಿ ಶಿವಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಂದಿನ ಉತ್ಪನ್ನಗಳ ಬಗ್ಗೆ ಸುಳ್ಳು ಸುದ್ದಿ ಹರಿಬಿಡಲಾಗುತ್ತಿದೆ. ಈ ಬಗ್ಗೆ ವಿಡಿಯೋಗಳನ್ನ ಕಂಡು ನಿತ್ಯ ಕೆಎಂಎಫ್ ಉತ್ಪನ್ನ ಬಳಸುವ ಜನರು ಆತಂಕ ಹೊರಹಾಕಿದ್ರು. ಇದೀಗ ವದಂತಿ ಹಬ್ಬಿದವರ ವಿರುದ್ಧ ಕಾನೂನು ಸಮರಕ್ಕೆ ಕೆಎಂಎಫ್ ಸಜ್ಜಾಗಿದ್ದು, ಸುಳ್ಳು ಸುದ್ದಿ ಹರಿಬಿಡುತ್ತಿರುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದೆ. ಕೆಎಂಎಫ್ ಉತ್ಪನ್ನಗಳ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿಗಳು ಹಬ್ಬಿದೆ. Dr ಶರಣ್ಯ ಸಂತೋಷ್ ಎಂಬುವವರು ಪೋಸ್ಟ್ ಮಾಡಿದ ವಿಡಿಯೋ ನೋಡಿ ಜನರು ಆತಂಕಗೊಂಡಿದ್ರು. ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಮಾತನಾಡಿದ್ದು, ಇದೆಲ್ಲಾ ಶುದ್ಧ ಸುಳ್ಳು, ಕೆಎಂಎಫ್ ಉತ್ಪನ್ನ ನೈಸರ್ಗಿಕವಾಗಿ ತಯಾರಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. KMF ಉತ್ಪನ್ನ ತಿಂದ್ರೆ ಕ್ಯಾನ್ಸರ್ ಬರುತ್ತೆ ಅಂತ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಇದು ಶುದ್ಧ ಸುಳ್ಳು, KMF ಉತ್ಪನ್ನಗಳನ್ನ ನೈಸರ್ಗಿಕವಾಗಿ ತಯಾರು ಮಾಡುತ್ತಿದ್ದೇವೆ. ಇದುವರೆಗೂ KMF ಬಗ್ಗೆ ಯಾವುದೇ ಕಂಪ್ಲೀಟ್ ಬಂದಿಲ್ಲ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಹೇಳಿದ್ದಾರೆ. ಸುಳ್ಳು ಸುದ್ದಿಗೆ ಕಿವಿ ಕೊಡಬೇಡಿ ಎಂದು ಕೆಎಂಎಫ್ MD ಶಿವಸ್ವಾಮಿ ಮನವಿ ಮಾಡಿದ್ರು.






Be the first to comment
Leave a Reply