ಐಪಿಎಲ್ ಆರಂಭವಾದಗಿನಿಂದ ಸತತ 18 ಋತುಗಳಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿರುವ ಕೊಹ್ಲಿ, ಆ ಫ್ರಾಂಚೈಸಿಗೆ ನಿಷ್ಠಾವಂತ ಆಟಗಾರನಾಗಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರ ಅದ್ಭುತ ಬ್ಯಾಟಿಂಗ್ನಿಂದ ಹಿಡಿದು, ಪ್ರತಿ ಬಾರಿ ಅವರು ಮೈದಾನಕ್ಕಿಳಿಯವಾಗ ತಂಡದ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ.

ಬೆಂಗಳೂರು, ಮಾ.3: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದ್ದಾರೆ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸುಮಾರು ಎರಡು ದಶಕಗಳ ಅಚಲ ಸೇವೆಯ ನಂತರ ಅವರನ್ನು ಫ್ರಾಂಚೈಸಿಯ ಶಾಶ್ವತ ಐಕಾನ್ ಮತ್ತು ನಾಯಕ ಎಂದು ಕರೆದಿದ್ದಾರೆ. ಅವರ ಈ ಹೇಳಿಕೆ ಐಪಿಎಲ್ 2026ರ ಆರಂಭಕ್ಕೂ ಮುನ್ನ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿ ಹೇಳಿರುವ ವಿರಾಟ್ ಇದೀಗ ಐಪಿಎಲ್ಗೂ ನಿವೃತ್ತಿ ಹೇಳಲಿದ್ದಾರಾ ಎಂಬ ಆತಂಕ ಅಭಿಮಾನಿಗಳಿಗೆ ಕಾಡಲಾರಂಭಿಸಿದೆ.
“ವಿರಾಟ್ ಕೊಹ್ಲಿ, ನಿಸ್ಸಂಶಯವಾಗಿ, ಅವರು ಶಾಶ್ವತವಾಗಿ ಈ ತಂಡದ ಐಕಾನ್ ಮತ್ತು ನಾಯಕನಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಅದು ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುವುದಿಲ್ಲ, ಮತ್ತು ಅವರು ಅದಕ್ಕೆ ಅರ್ಹರು. ಅವರ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ” ಎಂದು ಬೊಬಟ್ ಆರ್ಸಿಬಿ ಪಾಡ್ಕ್ಯಾಸ್ಟ್ನಲ್ಲಿ ಹೇಳಿದರು
“ಕಳೆದ ಋತುವಿನಲ್ಲಿ ಒಂದು ಹಂತದಲ್ಲಿ ಅವರ ಅಂಕಿಅಂಶಗಳನ್ನು ನೋಡಿದಾಗ ಅವರು ಎಷ್ಟೇ ರನ್ ಗಳಿಸಿದ್ದರೂ 18 ವರ್ಷಗಳು ಒಂದೇ ಶರ್ಟ್ ಧರಿಸಿದ್ದರು. ನಾವು ತಂಡದ ಭವಿಷ್ಯದ ನಿರ್ಧಾರದ ಬಗ್ಗೆ ಯೋಚಿಸುತ್ತಾ ಸಾಕಷ್ಟು ಸಮಯ ಕಳೆದೆವು. ನನ್ನ ವೃತ್ತಿಜೀವನದಲ್ಲಿ ನಾನು ಅಷ್ಟು ದೀರ್ಘ ಮತ್ತು ಆಳವಾಗಿ ಯೋಚಿಸಿದ ನಿರ್ಧಾರಗಳು ಇನ್ನೊಂದಿಲ್ಲ ಎಂದು ಹೇಳಲು ನನಗೆ ಅಭ್ಯಂತರವಿಲ್ಲ. ಮತ್ತು ಆ ಚಿಂತನೆಯು ಹಿಂದಿನ ಋತುವಿನಲ್ಲಿ ಪ್ರಾರಂಭವಾಯಿತು” ಎಂದು ಬೋಬಾಟ್ ಹೇಳಿದರು.
ಐಪಿಎಲ್ ಆರಂಭವಾದಗಿನಿಂದ ಸತತ 18 ಋತುಗಳಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿರುವ ಕೊಹ್ಲಿ, ಆ ಫ್ರಾಂಚೈಸಿಗೆ ನಿಷ್ಠಾವಂತ ಆಟಗಾರನಾಗಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವರ ಅದ್ಭುತ ಬ್ಯಾಟಿಂಗ್ನಿಂದ ಹಿಡಿದು, ಪ್ರತಿ ಬಾರಿ ಅವರು ಮೈದಾನಕ್ಕಿಳಿಯವಾಗ ತಂಡದ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ.

Be the first to comment
Leave a Reply