
ಬೆಂಗಳೂರು: ಅಮೆರಿಕ ಕನಸು ಹೊತ್ತು, ಲಗೇಜ್ ಪ್ಯಾಕ್ ಮಾಡಿಕೊಂಡು ಸಾವಿರಾರು ಭಾರತೀಯ ಯುವಕ, ಯುವತಿಯರು ಕೆನಡಾ ಹಾಗೂ ಕ್ಯಾಲಿಫೋರ್ನಿಯಾದ ಕದ್ದ ತಟ್ಟುತ್ತಾರೆ. ಆದ್ರೆ ಕರ್ನಾಟಕದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ನಿಗೂಢ ಸಾವು ಮಕ್ಕಳನ್ನ ವಿದೇಶಕ್ಕೆ ಓದಲು ಕಳುಹಿಸೋ ಪೋಷಕರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇದೀಗ ಸಾಕೇತ್ ಸಾವಿನ ಸುತ್ತ ಹಲವು ಅನುಮಾನ ಮೂಡಿದೆ.
ಸಾವಿಗೂ ಮುನ್ನ ಸಾಕೇತ್ ಕೊನೆಯ ಪೋಸ್ಟ್
ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕರ್ನಾಟಕ ಮೂಲದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ, ಕ್ಯಾಂಪಸ್‌ನಿಂದ ಹೊರಬಂದು ತಮ್ಮ ಗೆಳೆಯರಿಗೆ ಬೈ ಹೇಳಿ ಹೊರಟವನ್ನು ಮತ್ತೆ ರೂಮು ಸೇರಲಿಲ್ಲ. ಸಾಕೇತ್ ಸಾವಿಗೆ ಕಾರಣ ಏನು ಅನ್ನೋದೆ ನಿಗೂಢವಾಗಿದೆ. ಈತ ಪೋಷಕರು ನನ್ನ ಮಗ ಸತ್ತಿಲ್ಲ ಅಂತಿದ್ದಾರೆ. ಇದರ ನಡುವೆ ಸಾಕೇತ್ ಕೊನೆಯ ಪೋಸ್ಟ್ ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಮೃತ ಸಂಕೇತ್ ಶ್ರೀನಿವಾಸಯ್ಯ ತನ್ನ ಕೊನೆಯ ಪೋಸ್ಟ್ನಲ್ಲಿ ತನ್ನ ಪ್ರೀತಿಯ ಗೆಳೆಯ ಕೇದಾರ್ ಸುರೇಶ್ ಎಂಬಾತನನ್ನ ಸ್ಮರಿಸಿದ್ದ. ಸಾಕೇತ್ ಗೆಳೆಯ ಕೇದರ್ 2023ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗ್ತಿದೆ. ಐಐಟಿ-ಎಂನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ಪದವಿಪೂರ್ವ ವಿದ್ಯಾರ್ಥಿ ಕೇದಾರ್, ಏಪ್ರಿಲ್ 2023 ರಲ್ಲಿ ತನ್ನ ಹಾಸ್ಟೆಲ್ ಕೋಣೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ. ಕೇದರ್ ಸಾವಿನ ವಿಚಾರ ಸಾವು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸಾಕೇತ್ ಸಾವನ್ನಪ್ಪು ಮುನ್ನ ತನ್ನ ಕೊನೆಯ ಪೋಸ್ಟ್ನಲ್ಲಿ ಆತ್ಮಹತ್ಯೆಗೆ ಶರಣಾದ ಕೇದರ್ನನ್ನ ನೆನೆದಿರೋದು ನಾನಾ ಅನುಮಾನಕ್ಕೂ ಕಾರಣವಾಗಿದೆ. ಮಾನಸಿಕವಾಗಿ ನೊಂದಿದ್ದ ಸಾಂಕೇತ ಆತ್ಮಹತ್ಯೆ ನಿರ್ಧಾರ ಮಾಡಿದ್ರಾ ಎನ್ನುವ ಅನುಮಾನ ಕೂಡ ಮೂಡಿದೆ. ಸಾಕೇತ್ ಕಾಣೆಯಾದ 6 ದಿನಗಳ ಬಳಿಕ ಅಂಜಾ ಸರೋವರದ ಬಳಿ ಆರು ದಿನಗಳ ಬಳಿ ಶವವಾಗಿ ಪತ್ತೆಯಾಗಿದ್ದ. ಸಾಕೇತ್ ಶ್ರೀನಿವಾಸಯ್ಯನಿಗೆ ಒಂಟಿ ತನ ಕಾಡ್ತಿತ್ತು ಎಂದು ಆತನ ಸ್ನೇಹಿತ ಹೇಳಿಕೆ ನೀಡಿದ್ದಾನೆ. ಇತ್ತೀಚಿಗೆ ನನ್ನನ್ನ ಕೇರ್ ಮಾಡೋರೆ ಇಲ್ಲ ಅನ್ನೊ ಭಾವನೆಯಿಂದ ಸಾಕೇತ್ ನೊಂದಿದ್ದ ಎಂದು ರೂಮ್ ಮೇಟ್ ಹೇಳಿದ್ದಾರೆ.

ಅಮ್ಮನಿಗೆ ಕೊನೆಯ ಕಾಲ್ ಮಾಡಿದ್ದ
ಸೋಮವಾರ ತಾಯಿಗೂ ಕೊನೆಯ ಬಾರಿ ಕಾಲ್ ಮಾಡಿದ್ದ ಸಾಕೇತ್. ಆದ್ರೆ ಕಾರಾಣಾಂತರಗಳಿಂದ ಅಂದು ಕೂಡ ತಾಯಿ ಕಾಲ್ ಪಿಕ್ ಮಾಡಿಲ್ಲ. ಇದಾದ ಕೆಲ ನಿಮಿಷದಲ್ಲಿಯೇ ಸಾಕೇತ್ ಕಣ್ಮರೆ ಆಗಿದ್ದಾರೆ. ಆರು ದಿನಗಳ ಬಳಿಕ ಸಾಕೇತ್ ಶವವಾಗಿ ಪತ್ತೆಯಾಗಿದ್ದಾನೆ. ಪುತ್ರನ ಮೃತದೇಹ ನೋಡೋ ತನಕ ನಾವು ಅವನ ಸಾವಿನ ವಿಚಾರವನ್ನ ಒಪ್ಪಲ್ಲ ಎಂದು ಸಾಕೇತ್ ಪೋಷಕರು ಹೇಳಿಕೆ ನೀಡಿದ್ದಾರೆ. ಅತ್ತ ಇನ್ನೂ ಸಾಕೇತ್ ಪೋಸ್ಟ್ ಮಾರ್ಟಮ್ ನಡೆದಿಲ್ಲ. ಎಮರ್ಜೆನ್ಸಿ ವೀಸಾಗಾಗಿ ಕುಟುಂಬಸ್ಥರು ಎರಡು ದಿನಗಳಿಂದಲೂ ಶತ ಪ್ರಯತ್ನ ಮಾಡ್ತಿದ್ದಾರೆ.






Be the first to comment
Leave a Reply