Health Tips: ಡಯಾಬಿಟಿಸ್ ಎನ್ನುವುದು ಇಂದು ಸಾಮಾನ್ಯವಾಗಿದೆ. ಹಾಗಂತ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಡಯಾಬಿಟಿಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮುಖ್ಯ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು

ಡಯಾಬಿಟಿಸ್ (Diabetes) ದೀರ್ಘ ಕಾಲದ, ಗಂಭೀರ ಆರೋಗ್ಯ ಸಮಸ್ಯೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ವಿಫಲವಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಆರೋಗ್ಯ ಸಮಸ್ಯೆ ಮಿತಿ ಮೀರಿದರೆ ಹೃದಯಾಘಾತ, ಪಾರ್ಶ್ವವಾಯು, ಕಿಡ್ನಿ ವೈಫಲ್ಯ, ದೃಷ್ಟಿ ದೋಷ ಮತ್ತು ನರ ಹಾನಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ಇಂತಹ ಆರೋಗ್ಯ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಲು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
ಡಯಾಬಿಟಿಸ್ ಎನ್ನುವುದು ಇಂದು ಸಾಮಾನ್ಯವಾಗಿದೆ. ಹಾಗಂತ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಗಂಭೀರ ಸಮಸ್ಯೆಯಾಗಬಹುದು. ಹೀಗಾಗಿ ಸಮಯಕ್ಕೆ ಸರಿಯಾಗಿ ಡಯಾಬಿಟಿಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮುಖ್ಯ. ಸಾಮಾನ್ಯವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ 2 ಗಂಟೆಗಳ ನಂತರ ಮಾಡಿಸಿಕೊಳ್ಳುವುದು ಆವಶ್ಯಕ. ಇದರಿಂದ ನೀವು ಸೇವನೆ ಮಾಡುವ ಆಹಾರ ಹೊಂದಿಕೊಳ್ಳುತ್ತಿದೆಯೇ? ಹೇಗೆ ಕಂಟ್ರೋಲ್ ಮಾಡಬಹುದು ಎನ್ನುವುದನ್ನು ತಿಳಿಯಬಹುದು
ಮಧುಮೇಹ ಇದ್ದವರು ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಾಗಿ ರೋಗಿಗಳು ಪ್ರತಿದಿನ ತಮ್ಮ ಸಕ್ಕರೆ ಮಟ್ಟವನ್ನು ಪರಿಶೀಲಿಸುತ್ತಿರಬೇಕು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಿಸಿದಾಗ ನಮ್ಮ ದೇಹದಲ್ಲಿ ಗ್ಲುಕೋಸ್ನ ಪ್ರಮಾಣ ಎಷ್ಟು ಇದೆ ತಿಳಿಯುತ್ತದೆ. ಆದರೆ HbA1C ಪರೀಕ್ಷೆ ಮೂಲಕ ರಕ್ತದಲ್ಲಿನ ಸಕ್ಕರೆಯ ಸರಾಸರಿ ಮಾಹಿತಿ ತಿಳಿದು ಬರುತ್ತದೆ. ಇದರಿಂದ ಔಷಧ ಮತ್ತು ಇತರ ಅಂಶಗಳು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಹಾಗಾಗಿ ವೈದ್ಯರ ಸಲಹೆಯಂತೆ ಸರಿಯಾದ ಕ್ರಮಗಳನ್ನು ಪಾಲಿಸಿ.
ಪರಿಹಾರವೇನು?
- ಸರಿಯಾದ ಆಹಾರ ಕ್ರಮ ಪಾಲಿಸಿ.
- ತಿನ್ನುವ ಆಹಾರದ ಮೇಲೆ ನಿಗಾ ಇಟ್ಟು ಬೊಜ್ಜು ಕಡಿಮೆಮಾಡಿಕೊಳ್ಳಿ.
- ಊಟವಾದ ಬಳಿಕ ಹಾಗೆ ಕುಳಿತು ಕೊಳ್ಳದೆ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.
- ರಕ್ತ ಪರೀಕ್ಷೆಯನ್ನು ಮಾಡುವ ಮೊದಲು ಮತ್ತು ನೀವು ಔಷಧಗಳನ್ನು ತೆಗೆದುಕೊಂಡ ಒಂದು ಗಂಟೆಯ ನಂತರ ನಿಮ್ಮ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳಿ.
- ನಿಯಮಿತವಾಗಿ ವ್ಯಾಯಾಮ ಮಾಡಿ ದೈಹಿಕ ಶ್ರಮಕ್ಕೆ ಆದ್ಯತೆ ನೀಡಿ.






Be the first to comment
Leave a Reply