‘ಟಾಕ್ಸಿಕ್’ ಚಿತ್ರದಲ್ಲಿ ಕಾಣಿಸೋ ಈ ಜೋಕರ್ ಯಾರು? ಟ್ವಿಸ್ಟ್ ಮೇಲೆ ಟ್ವಿಸ್ಟ್​!

‘ಟಾಕ್ಸಿಕ್’ ಚಿತ್ರದಲ್ಲಿ ಕಾಣಿಸೋ ಈ ಜೋಕರ್ ಯಾರು? ಟ್ವಿಸ್ಟ್ ಮೇಲೆ ಟ್ವಿಸ್ಟ್​!

ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಟೀಸರ್‌ನಲ್ಲಿ ಕಾಣಿಸುವ ಜೋಕರ್ ಯಶ್ ಅವರೇ ಎಂಬ ಚರ್ಚೆ ಶುರುವಾಗಿದೆ. 70-80ರ ದಶಕದ ಸರ್ಕಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡ್ರಗ್ಸ್ ಕುರಿತ ಅಂಶಗಳೂ ಇವೆ ಎನ್ನಲಾಗುತ್ತಿದೆ. ಟಾಕ್ಸಿಕ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಟೀಸರ್ ರಿಲೀಸ್ ಆದ ಬಳಿಕ ಜನರು ಥ್ರಿಲ್ ಆಗಿದ್ದಾರೆ. ಈ ಸಿನಿಮಾದ ಟೀಸರ್ ಸಂಪೂರ್ಣವಾಗಿ ಯಶ್ ಅವರ ಮೇಲೆ ಸಾಗಿದೆ. ಟೀಸರ್​​ನಲ್ಲಿ ಹಲವು ತಿಳಿಯದ ವಿಷಯಗಳಿವೆ. ಅದನ್ನು ಅಭಿಮಾನಿಗಳು ರಿವೀಲ್ ಮಾಡುತ್ತಿದ್ದಾರೆ. ಈಗ ಟೀಸರ್​ ಅಲ್ಲಿ ಕಾಣಿಸೋ ಜೋಕರ್ ಯಾರು ಎಂಬುದು ರಿವೀಲ್ ಆಗೋ ಸಮಯ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

‘ಟಾಕ್ಸಿಕ್’ ಸಿನಿಮಾದ ಕಥೆ ಸಾಗೋದು 70 ಹಾಗೂ 80ರ ದಶಕದಲ್ಲಿ ಎನ್ನಲಾಗಿದೆ. ಆ ಸಂದರ್ಭದಲ್ಲಿ ಸರ್ಕಸ್ ಸಾಕಷ್ಟು ಪ್ರಚಲಿತದಲ್ಲಿ ಇತ್ತು. ಮನರಂಜನೆಗೆ ಹೆಚ್ಚಿನ ಆಯ್ಕೆ ಇಲ್ಲದ ಕಾರಣ ಜನರು ಮುಗಿಬಿದ್ದು ಸರ್ಕಸ್ ವೀಕ್ಷಣೆ ಮಾಡುತ್ತಿದ್ದರು. ‘ಟಾಕ್ಸಿಕ್’ ಚಿತ್ರದ ಕಥೆ ಆ ಘಟ್ಟದಲ್ಲೇ ಸಾಗುವುದರಿಂದ ‘ಟಾಕ್ಸಿಕ್’ ಚಿತ್ರದಲ್ಲಿ ಇದೇ ವಿಷಯ ಪ್ರಮುಖವಾಗಿ ತೆಗೆದುಕೊಳ್ಳಲಾಗಿದೆ. ಮೊಟ್ಟ ಮೊದಲು ರಿಲೀಸ್ ಆದ ಗ್ಲಿಂಪ್ಸ್ ಅಲ್ಲಿ ಸರ್ಕಸ್ ಸೆಟ್ ತೋರಿಸಲಾಯಿತು. ಇತ್ತೀಚೆಗೆ ಬಿಡುಗಡೆ ಆದ ಟೀಸರ್ ಉದ್ದಕ್ಕೂ ಸರ್ಕಸ್ ವಿಷಯವನ್ನೇ ತೋರಿಸಲಾಗಿದೆ. ಅದರಲ್ಲಿ ಜೋಕರ್ ಓರ್ವನನ್ನು ತೋರಿಸಲಾಗಿತ್ತು. ಇದು ಯಶ್ ಅವರೇ ಎಂದು ಹೇಳಲಾಗುತ್ತಿದೆ. ಟಿಕೆಟ್ ಹಾಗೂ ರಾಯ ಹೆಸರಿನ ಎರಡು ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಅಂದರೆ ಯಶ್ ಅವರದ್ದು ದ್ವಿಪಾತ್ರ. ಟಿಕೆಟ್​ ಪಾತ್ರಧಾರಿಯೇ ಜೋಕರ್ ಎನ್ನಲಾಗುತ್ತಿದೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಹರಿದಾಡಿವೆ. ಇದಕ್ಕೆ ಸಾಕ್ಷಿಗಳನ್ನು ಕೂಡ ಒದಗಿಸಲಾಗಿದೆ. ಈ ಸಿನಿಮಾದಲ್ಲಿ ಇನ್ನೂ ಯಾವ ರೀತಿಯ ಟ್ವಿಸ್ಟ್​​ಗಳು ಇರಲಿವೆ ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಸಿನಿಮಾ ಡ್ರಗ್ಸ್ ಬಗ್ಗೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಗ್ಯಾಂಗ್​​ಸ್ಟರ್ ಕಥೆ ಗಮನ ಸೆಳೆಯುವ ನಿರೀಕ್ಷೆ ಇದೆ.

Be the first to comment

Leave a Reply

Your email address will not be published. Required fields are marked *

ad image