ಇನ್ಮುಂದೆ ಮಹಿಳೆಯರು ಆಧಾರ್ ತೋರಿಸಿದ್ರೆ ಬಸ್​​ನಲ್ಲಿ ಸಿಗಲ್ವಾ ಫ್ರೀ ಟಿಕೆಟ್?

ಇನ್ಮುಂದೆ ಮಹಿಳೆಯರು ಆಧಾರ್ ತೋರಿಸಿದ್ರೆ ಸಿಗಲ್ವಾ ಫ್ರೀ ಟಿಕೆಟ್?
ಬೆಂಗಳೂರು: ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ನೀಡಿದೆ. ಈ ಯೋಜನೆ ಜಾರಿ ಆದ್ಮೇಲಂತೂ ಸಾರಿಗೆ ಬಸ್​ಗಳು ಮಹಿಳೆಯರಿಂದಲೇ ತುಂಬಿ ತುಳುಕುತ್ತಿದೆ. ಬಸ್ ಫ್ರೀ ಅಂತ ಮಹಿಳೆಯರು ಗುಂಪು ಗುಂಪಾಗಿ ಆಧಾರ್ ಕಾರ್ಡ್​ ಹಿಡಿದು ಸರ್ಕಾರಿ ಬಸ್​ ಹತ್ತುತ್ತಿದ್ರು.  ಇನ್ಮುಂದೆ ಸಾರಿಗೆ ಬಸ್ ಹತ್ತುವ ಮಹಿಳೆಯರು ಆಧಾರ್ ಕಾರ್ಡ್​ ತೋರಿಸಿದ್ರೆ ಟಿಕೆಟ್ ಕೊಡಲ್ವಾ ಕಂಡೆಕ್ಟರ್​? ಮಹಿಳೆಯರು ಉಚಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಆಧಾರ್​ ಕಾರ್ಡ್​ ಬದಲಿಗೆ ಸ್ಮಾರ್ಟ್​ ಕಾರ್ಡ್​​ ವಿತರಿಸಲು ಸರ್ಕಾರ ಮುಂದಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದ್ದು, ಸ್ಮಾರ್ಟ್​ ಕಾರ್ಡ್​ ವಿತರಣೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಉಚಿತ ಪ್ರಯಾಣಕ್ಕೆ ಸ್ಮಾರ್ಟ್​ ಕಾರ್ಡ್​!
ಕರ್ನಾಟಕ ಸಾರಿಗೆ ಬಸ್​ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರತಿನಿತ್ಯ ಲಕ್ಷಾಂತರ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಈಗ ಆಧಾರ್ ಬದಲಿಗೆ ಶಕ್ತಿ ಯೋಜನೆಯಡಿ ಸ್ಮಾರ್ಟ್‌ ಕಾರ್ಡ್‌ ವಿತರಣೆ ಸರ್ಕಾರ ನಿರ್ಧರಿಸಿದ್ದು, ಶೀಘ್ರವೇ ರಾಜ್ಯದ ಮಹಿಳೆಯರಿಗೆ ಸ್ಮಾರ್ಟ್​ ಕಾರ್ಡ್​ ಸಿಗಲಿದೆ.
ಆಧಾರ್​ ಕಾರ್ಡ್​ ತೋರಿಸಿದ್ರೆ ಸಿಗಲ್ಲ ಟಿಕೆಟ್​!

ಮಹಿಳೆಯರ ಉಚಿತ ಪ್ರಯಾಣಕ್ಕೆ 4 ಸಾರಿಗೆ ನಿಗಮಗಳು ಸ್ಮಾರ್ಟ್​ಕಾರ್ಡ್ ವಿತರಿಸಲಿವೆ. ಸ್ಮಾರ್ಟ್​ ಕಾರ್ಡ್ ವಿತರಣೆ ಬಳಿಕ ಮಹಿಳೆಯರು ಶಕ್ತಿ ಸ್ಮಾರ್ಟ್​ಕಾರ್ಡ್ ತೋರಿಸಿ ಉಚಿತವಾಗಿ ಬಸ್​ಗಳಲ್ಲಿ ಪ್ರಯಾಣಿಸಬಹುದಾಗಿದೆ. ಸ್ಮಾರ್ಟ್ ಕಾರ್ಡ್​ ವಿತರಣೆ ಬಳಿಕ ಆಧಾರ್ ಕಾರ್ಡ್‌ ತೋರಿಸಿದ್ರೆ ಟಿಕೆಟ್​ ಸಿಗಲ್ಲ. ಆಧಾರ್ ತೋರಿಸಿ ಉಚಿತವಾಗಿ ಪ್ರಯಾಣಿಸುವುದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಲಿದೆ.

Be the first to comment

Leave a Reply

Your email address will not be published. Required fields are marked *

ad image